ರೂಪಸಿ ಮನಸಾರೆ ಬಿಗಿದಪ್ಪಿ ಒಮ್ಮೆ ಹೇಳು

ನಿನ್ನ ಪ್ರೀತಿಯಲ್ಲಿ ತೇಲಿಹೋದೆ
ನಿನ್ನೊಲವಿಗಾಗಿ ಸೋತುಹೋದೆ
ನಿನ್ನೊಲುಮೆಗಾಗಿ ಹುಡುಕಿ ಬಂದೆ
ನನ್ನ ನಾನೇ ಮರೆತು ಹೋದೆ
ನಿನ್ನ ಒಳಗೂ ಸೇರಿಹೋದೆ
ಕನಸ ತುಂಬ ತುಂಬಿಕೊಂಡೆ
ಮನಸ ಮಾತ ಅರಿತುಕೊಂಡೆ
ಕಣ್ಣ ಒಳಗೆ ಹೆಕ್ಕಿ ತೆಗೆದರೂ
ನಿನ್ನ ಚಿತ್ರ ಉಳಿದುಹೋಗಿದೆ
ಮೊನ್ನೆವರೆಗೂ ಮೌನವಿದ್ದು,
ನೆನ್ನೆಯಿಂದ ನೀನೇ ಮುದ್ದು
ಪೆದ್ದು ಮನಸ ಕದ್ದು ಕೊಂಡೆಯಾ?
ಮುದ್ದು ಮಾಡಿ ಪ್ರೀತಿ ಕೊಟ್ಟೆಯಾ?
ನಗುವ ಚೆಲ್ಲಿ ಸೆಳೆದುಕೊಂಡೆಯಾ?
ಮೊಗದ ತುಂಬಾ ನಲಿವ ಇಟ್ಟೆಯಾ?
ನಿನ್ನ ಸ್ನೇಹ ಮಧುರ ಮಂಥನ
ನಿನ್ನ ಪ್ರೀತಿ ಘಮಲು ಚಂದನ
ಹೃದಯ ತುಂಬಾ ನೀನೇ ಸ್ಪಂದನ
ಮಧುರ ಭಾವ ಒಲವ ಸಿಂಚನ
ಸಕ್ಕರೆಯ ನಗುವ ಬೀರಿ
ಅಕ್ಕರೆಯ ಪ್ರೀತಿ ತೋರಿ
ಮಾತಿನಲೇ ಮೋಡಿ ಮಾಡಿ
ನಿನ್ನೆದೆಯ ಸೆರೆಮನೆಯಲಿ ಬಂದಿಸಿಬಿಟ್ಟೆಯಾ?
ಈಗ ನಾನು ರೋಗಿ, ಇಲ್ಲವೆ
ನಿನ್ನೆದೆಯ ಪ್ರೇಮಖೈದಿ!
ನಿನ್ನೊಲವ ಪ್ರೀತಿ ಕೊಂಚ ನನ್ನೊಳಗೂ ಬಚ್ಚಿಟ್ಟು
ಹೆಪ್ಪುಗಟ್ಟಿಸಿ, ಬಸಿರುಮಾಡಿ ನವಪ್ರೀತಿ ಉದಯಿಸುವಂತೆ ಮಾಡಿದವಳೇ
ನಿನ ಮಾತು ಚೂಟಿ, ನೀನು ಬಲು ಘಾಟಿ
ಕಲ್ಮಶವಿಲ್ಲದ ನಿನ ಮನಸ ತುಂಬ
ನನ್ನ ಚಿತ್ರಪಟವೇ ಪ್ರೇಯಸಿ?
ಮನದನ್ನೆ ನಾನು ಧನ್ಯ..! ನಾನು ಧನ್ಯ.....!
ಏ ರೂಪಸಿ, ನನ ಮೋಹಿಸಿ, ಪ್ರೀತಿಸಿ, ಕಾಡಿಸಿ ಮುದ್ದಿಸಿ,
ನಲುಮೆಯ ನವಿರಾದ ಸ್ನೇಹತೋರಿಸಿ
ಹಿತವಾದ ಭಾವನೆಗಳ ಬೆರೆಸಿದವಳೇ
ಮನಸಾರೆ ಬಿಗಿದಪ್ಪಿ ಒಮ್ಮೆ ಹೇಳು...












Click it and Unblock the Notifications