ನಾನು ಯಾರು?
* ಡಾ. ಉಷಾ ಪಾಠಕ್, ಮೈಸೂರು
ನಾನು ಯಾರು?
ಹಾಗೆಂದು ಯೋಚಿಸುವಾಗಲೆಲ್ಲ
ನನಗೆ ನೆನಪಾಗುವರು ಇವರೆಲ್ಲ
ನಾ ನೋಡಲು ಅಜ್ಜಿಯಂತಂತೆ
ಕೆಲಸದ ಅಚ್ಚುಕಟ್ಟು ಅಮ್ಮನ ಬಳುವಳಿ
ಅಪ್ಪನದೇ ಧಾರಾಳತನ
ಬರೆಯುವುದು ಒರೆಯುವುದು ಅಜ್ಜನಂತೆಯೇ ಅಂತೆ
ಅಣ್ಣನ ಸಹನೆ ಅಕ್ಕನ ಸಿರಿ ಕಂಠ
ಸೋದರತ್ತೆಯ ನೀಳಜಡೆ ಮಾಮನ ಹೊಟ್ಟೆಬಾಕತನ
ಎಲ್ಲರಿಂದೊಂದೊಂದು ಗುಣ ತನ ಪಡೆದ
ನಾನು ನಿಜಕ್ಕೂ ಯಾರು?
ತನ್ನಂತೆ ಪರರ ಬಗೆವ
ಅಯ್ಯಾ ಎನ್ನುತ ಸ್ವರ್ಗ ಕಾಣುವ
ಸಂತೆಯೊಳಗಿದ್ದೂ ಸಂತಳಂತಿರುವ
ಕುಲದ ನೆಲೆಯ ಕೆದಕದೆ ಕಡೆಗಣಿಸುವ
ಮಂದಿಯ ಓದಿಓದಿ ಮರುಳಾಗಿರುವ
ಕೂಚಂಭಟ್ಟಿನಿ!
ಉಷಾ ಪಾಠಕ್ ಇನ್ನೊಂದು ಕವನ : ಸೋಗಲಾಡಿತನ












Click it and Unblock the Notifications