ಸೋಗಲಾಡಿತನ

* ಡಾ. ಉಷಾ ಪಾಠಕ್, ಮೈಸೂರು

ಇದ್ದಾಗ ದೂರದಲಿ ನೀನು ಹತ್ತಿರವಿದ್ದೆ
ಕಣ್ಣ ಮುಂದೆಯೆ ಇರುವ ನೀ ದೂರವಾಗಿಹೆ ಏಕೆ

ನ್ಯಾಯಕ್ಕೆ ಕೂಗಾಡಿ ಸದ್ದಿನಲೆ ಒದ್ದಾಡಿ ಗುದ್ದಾಡಿ ಛಲಕಾಯುವ
ವಾಸ್ತವಕೆ ಕಣ್ತೆರೆವ ಧೀರೆ ಬೇಕು ನಿನಗೆ
ದಿನಕೆ ಸರಸಕೆ ಬರಿಯ ಗೆಳೆತನಕೆ

ಕರೆದೊಡನೆ ಓಗೊಡುವ ದೊರೆತನವ ಕಾದಿಡುವ ಸಜ್ಜನಿಕೆಯ
ಸಾತ್ವಿಕ ಸರಳ ಹರಿಣಿ ಬೇಕು ನಿನಗೆ
ಮದುವೆ ಮಂಟಪಕೆ ಅನುಗಾಲ ಜೀತಕ್ಕೆ

ಹೀಗೇಕೆ ಗೆಳೆಯ, ಬದಿಗೊತ್ತಿ ಇಬ್ಬಂದಿತನ ಬಹು
ಭಾವಗಳನರಿತು ಬೇಕುಬೇಡಗಳ ಅನುಸರಿಸು ಬೇಟೆ ಬೇಡ
ಬೇಕು ಅಂತರಂಗದ ಶುದ್ಧಿ ಮನೋವಿಕಾಸಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+