ಮತ್ತೆ ಮರೆಯಾಗುತ್ತೇನೆಂದು

ಅಂಗಳದ ಮುಂದೆ
ಹೆಜ್ಜೆಗಳ ಜೊತೆಯಾಗಿ
ನೆನಪುಗಳ ನಡಿಗೆ
ನೆರಳುಗಳ ಹಂಗಿಲ್ಲ
ಬೆಳಕಿನ್ನೂ ಹುಟ್ಟಿರದೆ
ಕಡುಗಪ್ಪು ಹಾದಿ
ಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆ
ಸುಮ್ಮನಿರಲೇಳಿ
ನಾನೂ ಮೌನಿಯಾಗುತ್ತೇನೆ.
ಮಾತುಗಳ ಮಳೆಯಿಲ್ಲ
ಮತ್ತೆ ಹುಟ್ಟುವ ಸೂರ್ಯ
ಕಿಟಕಿಯೊಳಗಿಂದ ತಲುಪಿ
ಮೈಮುರಿದು ಎಚ್ಚೆತ್ತು
ನೀ ಕಣ್ತೆರೆಯುವಷ್ಟರಲ್ಲಿ
ನಾ ಕಾಲಿಯಾಗುತ್ತೇನೆ
ಕಣ್ಣುಗಳ ಮಿಲನವಿಲ್ಲ
ಕತ್ತಲು ಬೆಳಕೆರಡೂ
ಬರುವ ಹೋಗುವ
ನಿತ್ಯದ ಹೊಂದಾಣಿಕೆಗೆ
ಮನಸೋತು
ಮಾತು ಕೊಟ್ಟಿದ್ದೇನೆ
ನೀವು ಸಂಧಿಸುವ ಸಮಯಕ್ಕೆ
ಸರಿಯಾಗಿ ಹಾಜರಿರುತ್ತೇನೆಂದು
ಮತ್ತೆ ಮರೆಯಾಗುತ್ತೇನೆಂದು..
ಚಿತ್ರ ಕೃಪೆ ; ನೆರಳು ಬೆಳಕು












Click it and Unblock the Notifications