ನಿನ್ನ ಪುಟ್ಟ ಪಾದಗಳು...

ನಿನ್ನ ಮೊಗಕ್ಕಿಂತ ನಾನು ನಿನ್ನ
ಪುಟ್ಟ ಪಾದಗಳನ್ನು ಪ್ರೀತಿಸುತ್ತೇನೆ..
ಸಂತಸದಿಂದ ಉಬ್ಬಿನಿಂತ ನಿನ್ನ
ದೃಡವಾದ ಪಾದಗಳನ್ನು ಪ್ರೀತಿಸುತ್ತೇನೆ..
ಅವೊಂದೆ ನಿನ್ನ ಜೊತೆಗಿದ್ದದ್ದು
ನಿನ್ನ ಸುಂದರ ದೇಹ ಅವುಗಳ ಮೇಲಲ್ಲವೆ ನಿಂತದ್ದು ?
ನಿನ್ನ ಬಳುಕಾಡುವ ಸೊಂಟ
ನಿನ್ನ ತುಳುಕಾಡುವ ಮೊಲೆ
ಗುಲಾಬಿ ಮೊಲೆತೊಟ್ಟು..
ಹತ್ತಿ ಹಗುರದ ನಿನ್ನ ಕಣ್ಣೆವೆ..
ಸಿಹಿಯಾದ ನಿನ್ನ ಕೆಂದುಟಿ
ಕಡುಗಪ್ಪು ಮುಂಗುರುಳು
ನಿನ್ನ ಬುಜದ ಮೇಲಿನ ನನ್ನ ಮೊಗ
ಅವಕ್ಕೆಲ್ಲ ಆಧಾರ ನಿನ್ನ ಪಾದಗಳೇ ಅಲ್ಲವೆ ?
ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಪಾದಗಳನ್ನು
ನಾನು ಪ್ರೀತಿಸುತ್ತೇನೆ ಏಕೆ ಗೊತ್ತಾ ?
ನೀರು ನೆಲ ಗಾಳಿಯ ವಿರೋಧ ಎದುರಿಸಿ
ನನ್ನ ಹುಡುಕಿ ಬಂದದ್ದು ನಿನ್ನ ಪಾದಗಳೇ ಅಲ್ಲವೇ ?











Click it and Unblock the Notifications