ಚಂದಿನ ಅವರ ಕವಿತೆ-ಹಿಡಿದಿಟ್ಟ

ನೆಪಕೊಂದು ಪುಸ್ತಕ ಕೈಗೆ
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ
ಯತ್ನ
ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳುಡುಕುವ
ತರ್ಕ
ಬೇಸಿಗೆಯ ಮದ್ಯಾಹ್ನ
ಆಗಸಕೆ ನೀರವ ಮೌನ
ಬೆಳ್ಳಕ್ಕಿಗಳ ಸಾಲು
ಕಾಣುವ ಹಂಬಲ
ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ, ಸಾಧಿಸಿದ
ನಿಟ್ಟುಸಿರು
ಮಲಗಿದ್ದ ದಿನ ಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳೆಸೆದಾಗ
ಕಸದ ಬುಟ್ಟಿಗೆ ಸಮಾಧಾನ
ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು
ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿ ಸಮಯ
ಹಗುರಾದ ಮನಸಿಗ
ಕೃತಕ ಮುಂಗೋಪ












Click it and Unblock the Notifications