ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭ್ರಮಗಳ ನಡುವೆ.... ದೀಪಗಳು

By Staff
|
Google Oneindia Kannada News
mahesh hegade kallaremane*ಮಹೇಶ್ ಹೆಗಡೆ ಕಲ್ಲರೆ, ಬೆಂಗಳೂರು.

ಸುತ್ತ ಜಗಮಗಿಸುವ
ದೀಪಗಳ ನಡುವೆ ಯಾಕೋ
ಬೆಳಕೇ ಕಾಣಿಸುತ್ತಿಲ್ಲ..
ಸಡಗರದಿಂದ ಹಚ್ಚಿಟ್ಟ ಹಣತೆ
ಬತ್ತಿಯ ಜೊತೆ ಮಣ್ಣಾಗಿದೆ

ಸುತ್ತ ಹಾರುವ ಪಟಾಕೆ
ಸಿಡಿಮದ್ದುಗಳ ನಡುವೆ ಯಾಕೋ
ಸದ್ದೇ ಕೇಳಿಸುತ್ತಿಲ್ಲ..
ಸಾವಿರ ಸದ್ದಿನ ಮದ್ದು
ಬತ್ತಿಯೇ ಕೆಟ್ಟು ಥಂಡಾಗಿದೆ

ಸುತ್ತ ಸಂಭ್ರಮಿಸಿ ಬಂದ
ಹಬ್ಬಗಳ ನೋಟ ಯಾಕೋ
ಕೇವಲ ಕಪ್ಪು ಬಿಳುಪು..
ಹಣತೆಗೆ ಬದಲಾಗಿ ಮೋಂಬತ್ತಿ
ಹಚ್ಚಲು ಕಡ್ಡಿಯೇ ಕಾಣಿಸುತ್ತಿಲ್ಲ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X