ಆಗಿದ್ದರು ನಮ್ಮಜ್ಜ ಶ್ಯಾನುಭೋಗರು
ಆಗಿದ್ದರು ನಮ್ಮಜ್ಜ ಶ್ಯಾನುಭೋಗರು
ಸಾಗಿತ್ತು ಊರಲ್ಲಿ ಅವರದೇ ದರಬಾರು
ಉಡುಗೆ ತೊಡುಗೆಯಲ್ಲವರು ತುಂಬಾ ನೀಟು
ಕಚ್ಚೆ ಪಂಚೆ ಮತ್ತೆ ಟೋಪಿ ಕೋಟು
ಮುಂದೆ ಬಂದಿದ್ದರವರು ಕಷ್ಟಪಟ್ಟು
ಬಹಳ ಬಡತನದ ಪಾಡು ಪಟ್ಟು
ಎಷ್ಟೇ ದೂರವಾದರೂ ನಡುಗೆಯಲ್ಲೇ ಪಯಣ
ಆಯಾಸವೆಂದರೇನೆಂಬುದೇ ತಿಳಿಯರು ಇವರಣ್ಣ
ಬಾಳಿ ಬದುಕಿದರಿವರು ಸ್ವಾಭಿಮಾನಿಯಾಗಿ
ನಮಗೆಲ್ಲರಿಗೂ ಬದುಕಿನ ದಾರಿದೀಪವಾಗಿ












Click it and Unblock the Notifications