ಪ್ರಕೃತಿ ಪ್ರಣಯ
* ರೇಣುಕಾ ನಿಡಗುಂದಿ, ನವದೆಹಲಿ
ಪ್ರಕೃತಿ ಪ್ರಣಯಕೆ
ರವಿಯು ಉದಯಕೆ
ಉಷೆಯ ರಂಜಿಸಿ ಬರುವನು,
ಹೂವ ರಾಶಿ
ಮಿಂದು ಹಿಮದಲಿ
ದುಂಬಿಯಾಟಕೆ ಸೆಳೆವಳು !!
ಕೆಂದಳಿರ ಚಿಗುರೆಲೆ
ತೊನೆದು ಬಳುಕುತ
ತಳಿರು ತೋರಣವೆಳೆದಿವೆ,
ಕಾಜಾಣ ಕೋಕಿಲ
ನಲ್ನುಡಿಗಳುಲಿಯುತಲಿ
ಇಂಪುರಾಗವ ನುಡಿಸಿವೆ !!
ಬಳಕುತಳುಕುತ
ಹರಿವ ಚೆಲುನದಿ
ನುಡುದೆ ಮಂಜುಳ ಘೋಷವ,
ಸೊಬಗ ಸೋನೆ
ಸುರಿವ ವನಸಿರಿ
ಇಳೆಗೆ ಕಳೆಯನು ತಂದಿರೆ !!
ಹಾಲು ಚೆಂದಿರ
ನಿಶೆಯ ಮಿಲನಕೆ
ತಂಬೆಳಕ ಸೂಸಿ ಬರುವನು
ಮತ್ತ ಮಧುವಿನ
ಮುಸುಕಿನಾಟವ
ಮೋಡ ಮರೆಯಲಿ ಕಂಡಿದೆ !!
(ದೋಣಿ ಸಾಗಲಿ - ಧಾಟಿಯಲ್ಲಿ)












Click it and Unblock the Notifications