ನೀನಾದೆ ಮರೀಚಿಕೆ : ದೀಪಾ ಅವರ ಕವನ
ದೀಪಾ ಜಿ. ಎಸ್, ಬೆಂಗಳೂರು.
ಬಂದಂತೆ ಬಂದೆ ಕನಸಲ್ಲಿ
ಕಂಡಂತೆ ಕಂಡೆ ಮನಸಲ್ಲಿ
ನಿಂತಿದೆ ನಿನ್ನ ಪ್ರತಿಬಿಂಬ
ನನ್ನ ಕಣ್ಣ ರೆಪ್ಪೆಯಲ್ಲಿ
ನಿನ್ನ ಹೆಸರಿನದೆ ಪ್ರತಿಧ್ವನಿ
ನನ್ನ ಹೃದಯದ ಧಮನಿಯಲ್ಲಿ
ಬಂದು ಕಾಣದೆ ಹೋದೆ
ಕಂಡು ಕೈಗೆಟುಕದಾದೆ
ಕನಸೊ ಮಂಪರೋ
ನಿನ್ನ ಹುಡುಗಾಟವೋ
ನನ್ನ ತೊಳಲಾಟವೋ
ಭ್ರಮೆಯೋ ನಿಜರೂಪವೋ
ಇದೆಂತ ಪರದಾಟವೋ
ನಿನ್ನ ಬಿಂಬವ ಸ್ಪರ್ಶಿಸಲಾಗಲಿಲ್ಲ
ನಿನ್ನ ಇರುವಿಕೆಯ ಪರಿವಾಗಲಿಲ್ಲ
ನಿನ್ನ ಆಗಮನವ ಪ್ರತಿಪಾದಿಸಲಿಲ್ಲ
ನಿನ್ನ ಗುಂಗಿಂದ ಹೊರಬರಲಾಗುತ್ತಿಲ್ಲ
ಮಿಂಚಂತೆ ಬಂದೆ
ಮರೆಯಾಗಿ ಹೋದೆ
ಸಂಚಂತೆ ಕಂಡೆ
ದೂರಾಗಿಹೋದೆ
ಕೈಹಿಡಿದು, ಮೈದಡವಿ
ಮಡಿಲಲ್ಲಿ ಮಲಗಿಸುವೆ
ನಿನ್ನೆಲ್ಲ ಚೇಷ್ಟೆಗಳ
ಕಾಟಗಳ ಸಹಿಸುವೆ
ನೀ ನನ್ನ ಬದುಕಲ್ಲಿ ಜೊತೆಯಾಗಬೇಕು
ನೀ ನನ್ನ ಬದುಕಿನ ಗುರಿಯಾಗಬೇಕು












Click it and Unblock the Notifications