ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನ :ನಾ ನಿನ್ನೊಳಗೊ,ನೀನನ್ನೊಳಗೊ

By Staff
|
Google Oneindia Kannada News
Vindhya Nagarajವಿಂಧ್ಯಾ ನಾಗರಾಜ್, ಬೆಂಗಳೂರು.


ಚಂಚಲ ಚಿತ್ತ,ನೂರು ನೂರು ತರಹ
ಸೂತ್ರ ಕಿತ್ತ ಸ್ವಚ್ಛಂದ ಪಟ
ಇಲ್ಲ ಚೌಕಟ್ಟು,ಆಯಾಮ
ಕಾಣದ ಪರಿಧಿ
ಹುಚ್ಚೆದ್ದು ಕುಣಿದು
ಅ೦ಕೆ ಇಲ್ಲದೊಡೆ
ನಾ ಬ೦ದಿ,ಸರಳುಗಳಾ ಹಿ೦ದೆ
ಕೀಲು ಜಡಿದ ಬಾಗಿಲು
ಬೇಡ ಶಾಪದೀ ಬದುಕು
ಒ೦ಟಿತನ,ಇಲ್ಲ ಸ್ವಾ೦ತನ
ಅ೦ತ್ಯ ಎ೦ತು,ಎ೦ದು???

"ಬೇಡ ಚಿ೦ತೆ"
ಮತ್ತೆ ಎ೦ತು!
ಚಿತ್ತ ಬ೦ದಿ
ಮುಷ್ಠಿಯಲ್ಲಿ
ತಕ್ಕುದಲ್ಲ ಸ್ವಚ್ಛ್೦ದ
ಸೂತ್ರ ನಿನ್ನಲು೦ಟು
ತಾಳಕಷ್ಟೇ ಕುಣಿಯಲಿಟ್ಟು
ಸೀಮಾರೇಖೆ ಹಾಕಿ ನೋಡು
ಬಾಗಿಲಾಚೆ..
ಬ೦ಧಮುಕ್ತ!
ಗರಿಗೆದೆರೆದು,ಹಾರಿದ೦ತೆ
ವರ ಪಡೆದ ಬದುಕು
ಎನಿತು ಸು೦ದರ.
ಒಮ್ಮೆ ಕೇಳಿ ನೋಡು
ನಾ ನಿನ್ನೊಳಗೋ,ನೀನನ್ನೊಳಗೋ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X