ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಜ್ಜೆ ಹಿಮ್ಮುಖವಾದಾಗ.

By Staff
|
Google Oneindia Kannada News
  • ಪ್ರೇಮಶೇಖರ, ಪಾಂಡಿಚೆರಿ

ಹೆಜ್ಜೆ ಹಿಮ್ಮುಖವಾದಾಗ. ನೆನಪಾಗದೇ ಹೋದ ವಿಷಯ
ಗಳೆಲ್ಲಾ ನಿನ್ನ ಬಗ್ಗೇ
ಅಂದರೆ ನೊಂದುಕೊಳ್ಳಬೇಡ
ಸತ್ಯದ ಒಂದು ಮಗ್ಗಲು ಹೀಗೂ ಇರುತ್ತದೆ
ನನಗೆ ವಿಷಾದವಾಗುತ್ತದೆ

ಒಂಟಿಹೆಜ್ಜೆಗಳಲ್ಲಿ ಕಂಡ ಕನಸು
ಗಳೆಲ್ಲಾ ಏಕಾಕಿತನದ ಬಗ್ಗೇ
ಅಂದರೆ ಮುಖ ತಿರುಗಿಸಬೇಡ
ಬದುಕಿನ ಒಂದು ಮುಖ ಹೀಗೂ ಇರುತ್ತದೆ
ನನಗೆ ಬಿಕ್ಕುವಂತಾಗುತ್ತದೆ

ನನಗೂ ಅನಿಸುತ್ತದೆ ಒಂದಲ್ಲಾ ಒಂದು ದಿನ
ನೆನಪುಗಳು ನವೆದು ಕನಸುಗಳು ಕರಗಿ
ಈ ಬದುಕು ಬರಡು ಬೆಂಗಾಡಾಗಿ ಬತ್ತಲ
ವಾಸ್ತವ ಇದಿರು ನಿಂತು ಹೆದರಿಸಿ
ಹೆಜ್ಜೆ ಹಿಮ್ಮುಖವಾದಾಗ
ಎಲ್ಲೆಲ್ಲೂ ನೀನೇ... ನನ್ನಲ್ಲೂ...
ಇರಬೇಕಿತ್ತೆಂದು... ಬೇಕೆಂದು...
ಸಾವಿರದೊಂದು ಕಥೆಗಳಲ್ಲೊಂದ
ದಿನಕ್ಕೊಂದರಂತೆ
ಹೇಳುತ್ತಿರಬೇಕೆಂದು
ಕೇಳುತ್ತಿರಬೇಕೆಂದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X