ಆಕಿ ಒಂಟ್ಯಾಳ ತವರಿಗ..!
ಆಕಿ ಒಂಟ್ಯಾಳ ತವರಿಗ
ಬಲು ಬೇಸರ ನನಗ
ಬ್ಯಾಡ ಅಂತೀವ್ನಿ ಮನಸಿನ್ಯಾಗ
ನನ್ನ ಕಂಡ್ರ ಪ್ರಾಣ ಆಕಿಗ
ನನ್ನದ್ರುಷ್ಟ-ಸಿಕ್ಕಾಳ ಜೊತಿಗ
ಯವ್ವಿ-ಯವ್ವಿ, ಎಂತ
ಚೆಂದ ಕಾಣಿಸ್ತಾಳ ನಕ್ಕಾಗ
ನಾ ಓದಿಲ್ಲ-ಬರೀಲಿಲ್ಲ ಶಾಲೀನಾಗ
ಒಡ್ಡ-ದಡ್ಡ, ಅಂತರ ಮನೀಗ
ಕಲಿಸ್ತಾಳೆ ನನ್ನಾಕಿ ಗುರುವಂಗ
ನೋಡ್ಕೊಂತಾಳೆ ನನ್ನ ಮಗುವಂಗ
ಕೈರಟ್ಟೆನಾಗ ಶಕ್ತಿ ಅದ..
ಅಂಬಲಿಯೋ-ಗಂಜಿಯೋ..ಮನೆಗಿರ್ತದ
ಕುಡಿಯಾಂಗಿಲ್ಲ-ಬೀಡಿ ಸೇದೊಂಗಿಲ್ಲ
ಯಾರ ತಂಟಿಗ್ ನಾ ಹೋಗಾಕು ಇಲ್ಲ
ಖುಷಿ ಆಗ್ತದ ಈಗ ನಂಗ
ಆಕಿ ಜೊತಿ ನಾ ಕಳೆಯೊ ದಿನದಾಗ
ಬಾಳ ಮುದ್ ಮಾಡ್ತಾಳೆ ನಂಗ
ಮೊನ್ನೆ ಹಿಂಗ ಬಾ ಅಂತ ಕರೆದ್ಲು ನಂಗ
ಕಿವಿಯಲ್ಲಿ ಹೇಳಿದ್ಲು ಮೂರುತಿಂಗಲು ನಂಗೀಗ
ತಲೀಗೊಳಿಲಿಲ್ಲ.. ನಂಗಾ..ಗ
ನಾಚ್ಕೊಂತ-ನನ್ನ ಸತಾಯಿಸ್ಕೊಂತ
ಹೇಳಿದ್ಲು- ನೀ ಅಪ್ಪ ಆಗ್ತೀಯಂತ
ಅಪ್ಪ-ಸಾಮೀ...! ಕುಣಿದ್-ಕುಣಿದ್-
ನಲಿದಾಡ್‌ಬಿಟ್ಟೆ ಮನೆತುಂಬ-
ನಾನೆ ಮಗಿನಂಗ...
ಈಗ ಬಾಣಂತನಕ್ ಒಂಟ್ಯಾಳ ತವರಿಗ
ಬ್ಯಾಡ ಅಂದ್ಕೊಂಡೆ ಮನಸಿನ್ಯಾಗ
ನನ್ನ ಮನೀಗ ಹುಟ್ಟುದ್ರೆ ಬ್ಯಾಡಂತದೇನ್ ನನ್ ಮಗ
ಅಯ್ಯೋ ನನ್ ಬುದ್ದಿಗಿಷ್ಟು..ನಾ ಹೇಳಿದ್ದೆಲ್ಲ ಆಯ್ತದ?
ಅದ್ಕೊಂಡಿದ್ ಸಾಕಂತೇಳಿ
ಕಳಿಸಿಕೊಟ್ ಬಂದೆ ತವರಿಗ












Click it and Unblock the Notifications