Get Updates
Get notified of breaking news, exclusive insights, and must-see stories!

ಈ ಆತ್ಮ ಹೇಡಿಯಲ್ಲ!

ಏನ ಹೇಳಲಿ ಈ ಆತ್ಮದ ಪರಿಯ
ಸದ್ಯಕಿರುವುದು ನನ್ನೊಳಗೆನ್ನುವುದು ಸರಿಯಾ
ಒಮ್ಮೆ ಸೇರುವುದು ದೃಢಕಾಯನ
ಇನ್ನೊಮ್ಮೆ ಶಕ್ತಿ ಇಲ್ಲದ ಕೃಶಕಾಯನ

ಎದುರಾಳಿಯ ಹಿಮ್ಮೆಟ್ಟಿಸಲು ಶಕ್ತಿ ತುಂಬುವುದು
ಕಷ್ಟ ಕೋಟಲೆಗಳ ತಾಳಲು ಧೃತಿಯನೀಯುವುದು
ಎಂದಿಗೂ ಬಗ್ಗುವುದಿಲ್ಲ ಬೆದರಿಕೆಗಳಿಗೆ
ಸಲ್ಲಿಸುವುದು ಪಾಠಗಳ ಸರಮಾಲೆ ಬಾಳಿಗೆ

ನಾ ಶಕ್ತಿ ಕುಸಿಯುತಿಹ ಕೃಶಕಾಯ
ಮನಸಿನಲೆದ್ದು ಕಾಣುವುದು ಭಯ
ಹಿಂದೆ ಬಂದು ಎಲ್ಲಿಲ್ಲದ ಸ್ಥೈರ್ಯ ತುಂಬುವುದು
ಪರಮಾತ್ಮನೊಂದಿಗೆ ಲೀನವಾಗಲು ಹಾತೊರೆವುದು

ಹೃದಯಗಳನು ತಲ್ಲಣಿಸಬಹುದು
ವರಿಸಬಹುದು ಪಲ್ಲವಿಸಬಹುದು
ಕಲ್ಲನೂ ಕರಗಿ ನೀರಾಗಿಸುವ ಶಕ್ತಿ ಹೊಂದಿಹುದು
ಇತರ ಆತ್ಮಗಳ ಸ್ಪಂದಿಸಬಹುದು
ನಿರಾಕಾರ ಸ್ವರೂಪಿ ದಿಗಂತವೂ ದಾಟಬಲ್ಲುದು

ಅನಂತವ ಅಳೆಯಬಲ್ಲ ಶಕ್ತಿ ಹೊಂದಿಹುದು
ಪ್ರೀತಿ ಪ್ರೇಮ ಕರುಣೆ ವಾತ್ಸಲ್ಯವ ಚಿಮ್ಮುಸುವುದು
ಅಧ್ಯಾತ್ಮದ ಕವಚ ಹೊದ್ದಿಹುದು
ಸಾವು ನೋವು ಅಳಿವಿನ ಭಯವಿಲ್ಲ ಇದಕೆ

ಚಿರಂತನ ಜೀವಕೆ ಜೀವವ ತುಂಬುವುದು
ಎಲ್ಲಿಲ್ಲದ ಶಕ್ತಿಯ ತುಂಬುವುದು
ಹಿಂದೆಯೇ ಕಾಣದಂತೆ ಉಡುಗಿಸುವುದು
ಕಷ್ಟ ನಷ್ಟಗಳ ಪರಿವೆಯಿಲ್ಲದುದು
ಸೂರ್ಯ ಚಂದ್ರರಷ್ಟೇ ಸತ್ಯ, ಚಿರನೂತನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+