Bengaluru Real Estate: ಬೆಂಗಳೂರು ರಿಯಲ್ ಎಸ್ಟೇಟ್ ಮೇಲೆ ಹೊಸ ಪ್ರಭಾವ: AI, ಉದ್ಯೋಗ ಅನಿಶ್ಚಿತತೆ ನಡುವೆ ಬೆಲೆ ಇಳಿಕೆ ಭೀತಿ
Bengaluru Real Estate: ಬೆಂಗಳೂರಿನಲ್ಲಿ ಭೂಮಿಗೆ ಅಕ್ಷರಶಃ ಚಿನ್ನದ ಬೆಲೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಪ್ರಮುಖ ಬದಲಾವಣೆಗಳಿಂದಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್‌ನ ಮೇಲೆ ತೀವ್ರ ಪ್ರಭಾವ ಶುರುವಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧ, ಎಐ ಹವಾ, ಟೆಕ್ ಕ್ಷೇತ್ರದಲ್ಲಿನ ಉದ್ಯೋಗ ಅನಿಶ್ಚಿತತೆ ಹಾಗೂ ಉದ್ಯೋಗ ಕಡಿತ ಸೇರಿದಂತೆ ಹಲವು ಕಾರಣಗಳಿಗೆ ಭೂಮಿ ಹಾಗೂ ಪ್ರಾಪರ್ಟಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಬೆಂಗಳೂರಿನ ಮನೆಮಾರುಕಟ್ಟೆ / ಪ್ರಾಪರ್ಟಿ ಬೆಲೆ ಏಕಾಏಕಿ ಇಳಿಕೆಯಾಗಬಹುದು ಎನ್ನುವ ಆತಂಕ ಶುರುವಾಗಿದೆ. ಜಾಗತಿಕವಾಗಿ ಟೆಕ್ ಕ್ಷೇತ್ರದ ಅನಿಶ್ಚಿತತೆ, ಉದ್ಯೋಗ ಕಡಿತಗಳು (layoffs) ಮತ್ತು AI ಪರಿಣಾಮದಿಂದ ಮನೆ ಖರೀದಿ ಮಾಡುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾತ್ರವಲ್ಲ ಇದೀಗ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಜನ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪ್ರಾಪರ್ಟಿಯನ್ನು ಖರೀರಿ ಮಾಡುವಾಗ / ಹೂಡಿಕೆ ಜನ ಎರಡು ಬಾರಿ ಯೋಚನೆ ಮಾಡುವಂತೆ ಆಗಿದೆ. ಮುಖ್ಯವಾಗಿ ದೊಡ್ಡ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಜನ ಧೈರ್ಯ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಉದ್ಯೋಗವನ್ನೇ ಕಳೆದುಕೊಂಡರೆ ಜನರಲ್ಲಿ ಹೆಚ್ಚಾಗುತ್ತಿದೆ.

ಇನ್ನು ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಲ್ಲಿ ಪ್ರಾಪರ್ಟಿ ಬೆಲೆಯು ಇಳಿಕೆ ಆಗುತ್ತಿದೆ. ಆದರೆ ಅಷ್ಟು ದೊಡ್ಡ ಮಟ್ಟದಲ್ಲಿ ಕುಸಿತ ಆಗಿಲ್ಲ. ಬೆಂಗಳೂರಿನಲ್ಲಿ ಇನ್ನೂ ನಿಜವಾದ ಅಗತ್ಯದಿಂದ (end-user demand) ಮನೆ ಖರೀದಿ ನಡೆಯುತ್ತಿದೆ. ಕೆಲವು ಪ್ರಮುಖ ಪ್ರದೇಶಗಳಲ್ಲಿ ಮನೆಗಳ ಲಭ್ಯತೆ ಕಡಿಮೆ ಇರುವುದರಿಂದ ಬೆಲೆಗಳು ತೀವ್ರವಾಗಿ ಇಳಿಯುವ ಸಾಧ್ಯತೆ ಕಡಿಮೆ ಎಂದೂ ತಜ್ಞರು ಅಂದಾಜಿಸಿದ್ದಾರೆ. ಇನ್ನೊಂದೆಡೆ ಮನೆಗಳ ಬೆಲೆ ಏಕಾಏಕಿ ಹೆಚ್ಚಾಗುತ್ತಿರುವುದರಿಂದ ಖರೀದಿದಾರರು ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದಾರೆ. ಈಗ ಹೂಡಿಕೆಗೆ ಆದ್ಯತೆ ನೀಡುವುದಕ್ಕಿಂತಲೂ ಅಗತ್ಯಕ್ಕೆ ತಕ್ಕಂತೆ ಮನೆ ಖರೀದಿ ಮಾಡುತ್ತಿದ್ದಾರೆ.
ಪ್ರೀಮಿಯಂ ಮನೆಗಳ ಮಾರಾಟದ ಮೇಲೆ ಪ್ರಭಾವ
ಇನ್ನು ಬೆಂಗಳೂರಿನಲ್ಲಿ ಪ್ರೀಮಿಯಂ ಮನೆಗಳ ಮಾರಾಟದ ಮೇಲೆ ಈ ಬದಲಾವಣೆಯು ಪ್ರಭಾವ ಬೀರುತ್ತಿದೆ. ಜಾಗತಿಕ ತಂತ್ರಜ್ಞಾನ ವಲಯದಲ್ಲಿನ ಅನಿಶ್ಚಿತತೆ ಹಾಗೂ ಉದ್ಯೋಗ ಕಡಿತ ವಿಚಾರವು ಗಂಭೀರ ಪರಿಣಾಮ ಬೀರುವುದಕ್ಕೆ ಶುರುವಾಗಿದೆ. ಬೆಂಗಳೂರಿನ ವಸತಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣದ ಬಗ್ಗೆ ಕಳವಳ ಶುರುವಾಗಿದೆ.
ಬೆಂಗಳೂರು, ಮುಂಬೈ ಹಾಗೂ ಗುರಗಾಂವ್‌ನಲ್ಲಿ ರಿಯಲ್ ಎಸ್ಟೇಟ್‌ಗೆ ಪೆಟ್ಟು ಬೀಳಲಿದೆ ಎನ್ನುವ ವಿಚಾರವು ಇತ್ತೀಚಿನ ವರ್ಷಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಾಪರ್ಟಿ ಬೆಲೆಗಳು ನಿಜವಾಗಿಯೂ ಕುಸಿತ ಕಂಡಿವೆಯೇ ಅಥವಾ ಯುದ್ಧದ ಪರಿಸ್ಥಿತಿ, AI ಇತ್ಯಾದಿಗಳ ಕಾರಣಕ್ಕೆ ತಾತ್ಕಾಲಿಕ ಹಿನ್ನಡೆ ಆಗಿದೆಯೇ ಎನ್ನುವ ಅನುಮಾನವೂ ಇದೆ.
ಇತ್ತೀಚೆಗೆ 2030ರಲ್ಲಿ ಸಿದ್ಧವಾಗುವ ಫ್ಲಾಟ್ ಬುಕ್ಕಿಂಗ ಮಾಡಿದ ಅನುಭವವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹೆಚ್ಚು ಸಾಲ ಮತ್ತು ಎಲ್ಲೆಡೆ ಉದ್ಯೋಗ ಕಡಿತದ ಪ್ರಮಾಣವು ಮನೆ ಖರೀದಿ ಮಾಡಿರುವ ಆತಂಕವನ್ನು ಹೆಚ್ಚಿಸಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ. ಒಟ್ಟಾರೆ ಬೆಂಗಳೂರಿನ ರಿಯಲ್ ಎಸ್ಟೇಟ್‌ನ ಮೇಲೆ ವಿವಿಧ ವಿಷಯಗಳು ಪ್ರಭಾವ ಬೀರಿವೆಯಾದರೂ, ದೊಡ್ಡ ಮಟ್ಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.












Click it and Unblock the Notifications