Get Updates
Get notified of breaking news, exclusive insights, and must-see stories!

ಕಲಿಯುಗ ವಚನಗಳು

ಬಂಗಲೆಯೊಳಗೆ ಮಾಲೀಕನಿದ್ದಾನೋ ಇಲ್ಲವೊ
ಗೇಟಿಗೆ ಬೀಗ ಜಡಿದು, ನಾಯಿಯ ಅಡ್ಡಾಡಬಿಟ್ಟು
‘‘ನಾಯಿ ಕರ್ತವ್ಯದಲ್ಲಿದೆ!’’ ಎಂಬ ಬೋರ್ಡ ತಗುಲಿಸಿ
ಹೊರಗೆಲ್ಲೊ ಹೋಗಿರುವನೇನೋ ಮಾಲೀಕ.
ಸವಳು ಮಾಡಿ, ಒಳನುಗ್ಗಿ ಸಿಕ್ಕಿದ್ದ ದೋಚಿ ಬಾ
ಎಂದ ನಮ್ಮ ಕಲಿಮಹರಾಯ!

*

ಉಳ್ಳವರು ಮಹಾನಗರದೊಳು ಮನೆಯ ಕಟ್ಟುವರು
ನಾನೇನ ಮಾಡಲಿ ಬಡವನಯ್ಯಾ.
ನೇರಹಾದಿಯೊಳು ಸಂಪಾದನೆಗಿಳಿದು,
ಹೊಟ್ಟೆ-ಬಟ್ಟೆಗೆ ನೇರಮಾಡಿಕೊಂಡಿಹೆನು.
ಇಂತಿಪ್ಪ ಸ್ಥಿತಿಯೊಳು ಬಾಡಿಗೆ ಮನೆಯೊಳಿದ್ದು
ಸ್ವಂತದೆಂಬಂತೆ ತೃಪ್ತಿಯಿಂದಿರುವೆ.
ಕಲಿಮಹರಾಯ ಕೇಳಯ್ಯಾ,
ಸ್ವಂತದ್ದು ಮುಪ್ಪಾದರೂ ಬಾಡಿಗೆ ಮನೆಗೆ ಮುಪ್ಪಿಲ್ಲ.

*

ಕ್ರಿಷ್‌ ಚಿತ್ರದ ಹೃತಿಕನಂತೆ
ಮೂವತ್ತು ಅಡಿ ನೆಗೆಯಲಾಸೆಮಾಡಿ
ಹುಚ್ಚು ಚಿತ್ರವೀಕ್ಷಕ ಬಾಲ್ಕನಿಯಿಂದ ಸೆಕೆಂಡ್‌ ಕ್ಲಾಸಿಗೆ ನೆಗೆದನಂತೆ!
ಅವನೇನು ಬಲ್ಲನಯ್ಯಾ ಸಿನಿಮಾ ರೀಲೇ ಹೊರತು ರಿಯಲಲ್ಲವೆಂದು?
ಇಲ್ಲಿ ಡ್ಯೂಪಿಗೆ ಬೆಲೆಯೇ ಹೊರತು, ರಿಯಾಲಿಟಿಗೆ ಬೆಲೆಯಿಲ್ಲಯ್ಯ.
ರಿಯಾಲಿಟಿ ತೋರಿಸಲೊರಟು ಕೊನೆಗೆ
ಮೈಯ ನಟ್ಟು-ಬೋಲ್ಟೆಲ್ಲಾ ಲೂಸುಮಾಡಿಕೊಂಡು ಕೂತನಯ್ಯಾ
ಇವ ನಿಮಗೆ ಪ್ರಿಯನೇ ಕಲಿಮಹರಾಯ?

*

ಸಚಿನ್‌ ತನ್ನ ಬ್ಯಾಟು ಮಾರುವೆನೆಂದರೆ
ಬೆಲೆಯಿಲ್ಲದಷ್ಟು ಹಣ ಸುರಿವರಯ್ಯಾ,
ಐಶ್ವರ್ಯ ರೈ ತನ್ನ ಉಡುಗೆ ಮಾರಲಿಟ್ಟರೆ
ಕೋಟಿ ಕೋಟಿ ಹಣಕೊಟ್ಟು ಕೊಳ್ಳುವರಯ್ಯಾ,
ಹೇಸಿಗೆ ಒಣಗಿಸಿ ಒಗ್ಗರಣೆ ಹಾಕಿ ಅಶೋಕ ಹೋಟೆಲಿನಲ್ಲಿಟ್ಟರೂ
ಲೊಚ ಲೊಚ ತಿಂದು ಬಿಲ್‌ ಮಾಡಿದಷ್ಟು ಕಾಸು ಕೊಡುವರಯ್ಯಾ,
ಜೀನ್ಸು, ಟಾಪು ತೊಟ್ಟ ಲಲನಾಂಗಿಯರ ಬೈಕು-ಕಾರಿನಲಿ
ಹೊತ್ತೊಯ್ದು ಕಾಫಿ-ಡೇನಲ್ಲಿ ಹರಟೆ ಹೊಡೆದು ಕಿಸೆ ಖಾಲಿಮಾಡುವರಯ್ಯಾ,
ಹತ್ತು ಸೆಂಟಿಮೀಟರ್‌ ಬಟ್ಟೆ ತೊಟ್ಟು ಕ್ಯಾಮೆರಾ ಮುಂದೆ ಕ್ಯಾಬರೆ ಕುಣಿದವಳ
ಥಿಯೇಟರಿನ ಸ್ಕಿೃೕನ ಮೇಲೆ ನೋಡಿ ದುಡ್ಡು ಎರಚುವರಯ್ಯಾ,
ಈಜನ, ನೇಗಿಲು ಹಿಡಿದು ದುಡಿದು ದಣಿವ ಭೂತಾಯಿ ಕಂದನ
ಬೆಳೆಗೆ ಬೆಲೆಕೊಡಲು ಹಿಂಜರಿವರಯ್ಯಾ.
ಹೆಸರು, ಸೌಂದರ್ಯಕೆ ಬೆಲೆಯೇ ಹೊರತು,
ಬೆವರಿಗೆ ಬೆಲೆಯಿಲ್ಲ ನೋಡಯ್ಯಾ ಕಲಿಮಹರಾಯ.

*

ಲೇ ಹುಡುಗಿ, ನೀನು ತುಂಬಾ ಚೆನ್ನಾಗಿದ್ದೀಯ
ಎಂದರೆ ನಿನ್ನ ಗಂಟಲು ಹೊಡೆದು ಹೋಗುವುದೇ?
ಬೈಕಿನಲಿ ಕುಳ್ಳಿರಿಸಿ ಸಿನಿಮಾ-ಪಾರ್ಕಿಗೆ
ಹೊಯ್ದರೆ ನಿನ್ನ ಬೈಕು ಪಂಕ್ಚರ್‌ ಹಾಗುವುದೇ?
ಅವಳ ಕೈಗೆ ಗುಲಾಬಿಯಿಟ್ಟು ‘‘ಐ ಲವ್‌ ಯು’’
ಎಂದರೆ ನಿನ್ನ ಹೊಟ್ಟೆ ಬಿರುಕು ಬಿಡುವುದೇ?
ಮದುವೆಯಾಗದಿದ್ದರೊಂದು ಓದು ಮುಗಿವತನಕ
ಸುತ್ತಾಡಿ ಎನ್ಜಾಯ್‌ು ಮಾಡಿದರೆ
ನಿಮ್ಮ ತಾತನ ಗಂಟು ಕರಗುವುದೇ?
ಸುಮ್ಮನೇಕೆ ಕಾಲೇಜಿನೊಳು ಪುಸ್ತಕದ ಬದನೇಕಾಯಿಯಾಗುವೆ
ಹೊರ ಪ್ರಪಂಚವ ನೋಡಿ ಕಲಿ ಎಂದ ನಮ್ಮ ಕಲಿಮಹರಾಯ.

*

ಬೆಂಗಳೂರಿನಂತ ಮಹಾನಗರದೊಳು
ಒಂದು ದೊಡ್ಡ ವ್ಯಾಪಾರವಿಕ್ಕಿ
ನ್ಯಾಯಕ್ಕೆ ಬೆಲೆಕೊಟ್ಟು, ಸತ್ಯವ ತೂಗಿದರೆ,
ಉಳಿಯುವುದೇ ಆ ವ್ಯಾಪಾರ?
ಇದ ಬಿಟ್ಟು ಗಿರಾಕಿಯ ತಲೆಗೆ ಕೈಯಿಟ್ಟರೆ
ಹಣದೊಳು ತೇಲಿ ಹಣದೊಳು ಮುಳುಗಬಹುದು
ನೋಡಾ ಎಂದ ನಮ್ಮ ಕಲಿಮಹರಾಯ.

*

ಮೇಲಾಗಬೇಕು ಕೀಳಾಗುವುದಲ್ಲ
ಸಚಿನ್‌, ಅಮಿತಾಬ್‌, ಐಶ್ವರ್ಯ, ಸಾನಿಯಾರಂತೆ ಮಿಂಚಬೇಕು,
ಟಾಟಾ, ಬಿರ್ಲಾ, ಬಿಲ್‌ಗೇಟ್ಸ್‌ರಂತೆ ಲೋಲಪತಿಯಾಗಬೇಕು,
ಸರ್ಕಾರಿ ಕೆಲಸವಾದರೂ ಸೂಟಕೇಸುಗಟ್ಟಲೆ ಲಂಚಬರಬೇಕು,
ರಾಜಕಾರಣಿಯಾದರೆ ಸೀಟು ಖಾಯಂ ಇರಬೇಕು,
ಖಾಸಗೀ ಕೆಲಸವಾದರೆ ಎಮ್ಮೆನ್ಸಿ ಕಂಪನಿಗಳ ನೌಕರನಾಗಬೇಕು,
ಸ್ವಂತ ಉದ್ಯೋಗವಾದರೆ ದೊಡ್ಡ ಕಂಟ್ರ್ಯಾಕ್ಟರ್‌ ಆಗಬೇಕು,
ಅಕ್ರಮ ಜೀವನವಾದರೂ ಭೂಗತ ದೊರೆಯಾಗಬೇಕು,
ಇದಲ್ಲದೆ ಈ ಕಲಿಯುಗದೊಳು ಜೀವನ ನರಕ ನೋಡಯ್ಯಾ.
ಕಷ್ಟಪಟ್ಟು ಸ್ವಾಭಿಮಾನದಿ ದುಡಿವವರ ಪಾಡು-ಪಾದಂಗಳಿಗೆ ನಮೋನಮ:
ಅವರ ಪಾದವ ಜೆರಾಕ್ಸ್‌ ತೆಗಿ ಎಂದ ನಮ್ಮ ಕಲಿಮಹರಾಯ!
*

ಮದ್ಯ ಕುಡಿದ ಕುಡುಕನಂತೆ ಅದರ ರುಚಿಯ ನೆನೆಯುತಿರು ಮನವೆ.
ಲಂಚ ತಿಂದ ಲಂಚಕೋರನಂತೆ ಅದಕ್ಕೇ ಕೈಯೊಡ್ಡು ತನುವೇ
ಮೋಸವೆಂಬುದನ್ನು ಕಲಿತು ಕಾಂಚನವ ಸಂಪಾದಿಸು ನೀ
ಇದೇ ನಮ್ಮ ಕಲಿಮಹರಾಯನಿಗೆ ಅರ್ಪಿತ, ಮನವೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+