ಕಳೆದು ಹೋಗಿದ್ದಾಳೆ ರಾಧೆ ; ಹುಡುಕಿ ತರುವೆಯಾ ಶಾಮ?
;?ಸಂತೆಯ ನಡುವೆ ದಿವ್ಯಪ್ರೇಮದ ಆಲಾಪದಂತಿರುವ ಓ ಗೆಳತಿ, ಒಲುಮೆಯ ಹೂವೆ ನೀಹೋದೆ ಎಲ್ಲಿಗೆ? ಬರಹವನ್ನು ನೀವು ಮೆಲುಕುಹಾಕಿರಬಹುದು. ಅಲ್ಲಿನ ಅಕ್ಷರ ಅನುಸಂಧಾನ ಅನೇಕರಿಗೆ ಇಷ್ಟವಾಗಿದೆ , ಕಷ್ಟವಾಗಿದೆ. ತಮಗನಿಸಿದ್ದನ್ನು ಪ್ರತಿಕ್ರಿಯೆ ರೂಪದಲ್ಲಿ ಅಪಾರ ಓದುಗರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಕವನ ಕುಸುಮವೊಂದು ಇಲ್ಲಿದೆ. ಆಧುನಿಕ ರಾಧೆಯ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳಿಗೆ ಈ ಕವಯತ್ರಿ ಹಿಡಿದ ಕನ್ನಡಿಯಲ್ಲಿ, ಯಾರ್ಯಾರ ಪ್ರತಿಬಿಂಬಗಳು ಮೂಡಿವೆಯೋ?

- ಅಂಜಲಿ ರಾಮಣ್ಣ, ಬೆಂಗಳೂರು
[email protected]
ಬಿಸಿನೀರಿಗೆ ಒಲೆ ಒಟ್ಟುತ್ತಾ...
ಕಾಫಿ‚ಯನ್ನು ಫಿ‚ಲ್ಟ್‌ರ್‌ನಲ್ಲಿ ಹನಿಸುತ್ತ...
ಅಕ್ಕಿ ಬೇಯಿಸಿ ಅನ್ನ ಬಸಿದು ಸಾಸಿವೆ ಸಿಡಿಸುತ್ತಾ...
ಮಕ್ಕಳ ಹೆಗಲಿಗೆ ಪಾಠಿ ಚೀಲ ಹಾಕುತ್ತಾ...
ಗಂಡನ ಬಗಲಿಗೆ ಬುತ್ತಿ ಗಂಟನ್ನು ಸಿಕ್ಕಿಸುತ್ತಾ...
ಬಸ್ಸಿನ ಬಾಗಿಲು-ಬೆವರು ತೊಗಲಿನೊಡನೆ ಗುದ್ದಾಡುತ್ತಾ...
ಕಂಪ್ಯೂಟರ್ ಫ‚ಾ್ಯಕ್ಸ್‌ಗಳಿಗೆ ‘ಎಸ್ ಬಾಸ್’ ಎನ್ನುತ್ತಾ...
ಕೀಲು ಬೊಂಬೆಯಂತೆ ತರಕಾರಿ ಕತ್ತರಿಸುತ್ತಾ...
ಇರುಳಿಗೆ ತುತ್ತು ಊಡಿಸುತ್ತಾ...
ಹಾಸಿಗೆಯ ಹೊಟ್ಟೆ ತುಂಬಿಸುತ್ತಾ...
ಗೊಂದಲದಲಿ...ಒತ್ತಡದಲ್ಲಿ...
ಕಳೆದು ಹೋಗಿದ್ದಾಳೆ ರಾಧೆ
ಹುಡುಕಿಕೊಡುವೆಯಾ ಶಾಮ?...
*
ನಿನ್ನ ನಡಿಗೆಗೆ ಹೆಜ್ಜೆಯಾಗುತ್ತಾ...
ನಿನ್ನ ಭುಜಕ್ಕೆ ಬಳ್ಳಿಯಾಗುತ್ತಾ...
ನಿನ್ನ ಅಧರಕ್ಕೆ ಮಧುವಾಗುತ್ತಾ...
ನಿನ್ನ ಉಸಿರಿನ ಬಿಸಿಗೆ ಶಾಖವಾಗುತ್ತಾ...
ನಿನ್ನ ಕಿವಿಯಲ್ಲಿ ಅಂತರಂಗದ ತರಂಗವನ್ನೆಬ್ಬಿಸುತ್ತಾ...
ನಿನ್ನ ಬೆರಳುಗಳಿಗೆ ಸ್ಪರ್ಶವಾಗುತ್ತಾ...
ನಿನ್ನ ಕೊಡುವಿಕೆಗೆ ಕಣ್ಣಂಚಿನ ಹನಿಯ ಹುಸಿ ನಗುವಾಗುತ್ತಾ. .
ನಿನ್ನಲ್ಲಿ ತನ್ನನ್ನೆ ಅರಸುತ್ತಾ...
ನಿನ್ನ ಆಕಾಶಕ್ಕೆ ಅವಕಾಶವಾಗುತ್ತಾ...
ನಿನ್ನಯ ಮುರಳಿಯ ನಾದವಾಗುತ್ತಾ...
ಹಂಬಲದಲ್ಲಿ...ಕನವರಿಕೆಯಲ್ಲಿ...
ಕಳೆದು ಹೋಗಿದ್ದಾಳೆ ರಾಧೆ
ಹುಡುಕಿತರುವೆಯಾ ಶಾಮ?...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications