ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯವೆಂದರೆ ಇದೇನಾ?

By Staff
|
Google Oneindia Kannada News

;?

ಸ್ವಾತಂತ್ರ್ಯೋತ್ಸವ- ಸ್ವಾತಂತ್ರ ಸುವರ್ಣ ಮಹೋತ್ಸವ
ದಿಲ್ಲಿಯಿಂದ ಗಲ್ಲಿ ಗಲ್ಲಿಯವರೆಗೂ ಏರ್ಪಟ್ಟಿತ್ತು ವಿಚಾರ ಸಂಕಿರಣ
ವೇದಿಕೆಯ ಮೇಲೆ ನೆರೆದಿದ್ದವರು ಎಲ್ಲರೂ ಪದ್ಮಶ್ರೀ ಪದ್ಮ ವಿಭೂಷಣ

ಫಲಕದಲ್ಲಿ ಬರದಿತ್ತು ಐದು ವರ್ಷಗಳ ಸಾಧನೆ ಒಂದು ಸಂಶೋಧನೆ
ಕೇಳಬೇಕೆ ಬುದ್ಧಿಜೀವಿಗಳ ಚರ್ಚೆ ಬೋಧನೆ?
ಛೆ! ಇರುವುದನ್ನೆಲ್ಲಾ ಮರೆತು ಇಲ್ಲದ್ದನ್ನು ನೆನೆವರು ಇವರು ಏಕೆ?
ನಮ್ಮ ವರ್ತಮಾನಕ್ಕಿಂತ ಇವರಿಗೆ ಸಾಧನೆ ಬೇಕೆ?

ಅಂದೆಂದೋ ಇದ್ದರಂತೆ ಗಾಂಧಿ ನೆಹರುಗಳು, ಲಜಪತ್‌ ರಾಯ್‌ ವಲ್ಲಭಭಾಯ್‌ಗಳು
ಇಂದೂ ತಾನೆ ಇಲ್ಲವೇ
ಒಂದಂಕಿ ಲಾಟರಿಗಳು ಸ್ಯಾಷೆ ಸಾರಾಯಿಗಳು
ಹಿಂಡಿ ಬೂಸ ಮೇಯುವ ಲಾಲು-ಲಲ್ಲುಗಳು

ದೇಶಕ್ಕಾಗಿ ಪ್ರಾಣತೆತ್ತರಂತೆ ಅಂದು ಜಲಿಯನ್ವಾಲ ಭಾಗಿನಲ್ಲಿ
ನಾವೂ ಉಸಿರುಗಟ್ಟಿಸಲ್ಲಿಲ್ಲವೇ ನಮ್ಮವರನ್ನೇ ಇಂದು
ಭೂಪಾಲ್‌ ಅನಿಲ ದುರಂತದಲ್ಲಿ

ಭಾರತಾಂಬೆಯ ಹೆಮ್ಮೆಯ ಪುತ್ರರಂತೆ
ನೂರಾರು ಭಗತ್‌ಸಿಂಗರು, ಸಾವಿರಾರು ಸುಭಾಷ್‌ಚಂದ್ರರು,
ಇದೇ ಭಾರತಿ ಹೊತ್ತ ಕೂಸುಗಳಲ್ಲವೇ ಈಗಿನ
ಲಕ್ಷಾಂತರ ಹವಾಲಗಳು ಕೋಟ್ಯಾಂತರ ಹರ್ಷದರು...

ಅಂದು ಜನಮನದ ಆರಾಧನೆ
ಬಾಲ ಗಂಗಾಧರ ತಿಲಕರಿಗೆ, ಸರಸ್ವತಿ ದಯಾನಂದರಿಗೆ,
ಇಂದು ನಮ್ಮ ತನು ಧನದ ಸಮಾರಾಧನೆ
ಸ್ವಾಮಿಗಳ ಸ್ವಾಮಿ ಚಂದ್ರಾಸ್ವಾಮಿಗೆ - ತಂತ್ರಿ ಕುತಂತ್ರಿ ಪ್ರೇಮಾನಂದರಿಗೆ...

ಮನೆ ಮಂದಿಗೆಲ್ಲ ಅಂದು ದೇಶ ಪ್ರೇಮ
ಪರಹಿತ ಪರಿಸರ ಪ್ರೇಮ;
ಇದ್ದರೂ UNO-WHOಗಳೊಡನೆ ಒಡನಾಟ
ಆಡಿಸಲ್ಲಿಲ್ಲವೇ ನಾವು ಸೂರತ್ತಿನ ತುಂಬಾ ಪ್ಲೇಗಿನಾಟ...

ಜನ ಸೇವೆಯೇ ಜನಾರ್ಧನ ಸೇವೆ ಎಂದರಂತೆ
ಸರೋಜಿನಿ ಬಾಯಿ ಕಸ್ತೂರಿ...
ಜನರೇ? ಯಾರವರು ಎಂದ ಜಯಲಲಿತ
ಬಾರಿಸಲ್ಲಿಲ್ಲವೇ ನಾಣ್ಯದ ನಗಾರಿ...

ಮುಟ್ಟಿಲ್ಲವೇ ನಮ್ಮ ಜನ ಸಂಖ್ಯೆಯಲ್ಲಿ
ಒಂದಲ್ಲ ಎರಡಲ್ಲ 99 ಕೋಟಿ
ನಡು ನಡುವೆ ನರಳುತ್ತಿಲ್ಲವೇ ಇಂದೂ
ಈಗಲೂ ಹಲವಾರು ಅರ್ಚನ ಅಂಬಟ್ಟಿ

ತುರ್ತು ಪರಿಸ್ಥಿಯಿಂದ ಪ್ರಸ್ತುತ ಸ್ಥಿತಿಯವರೆಗೂ
ಇನ್ನೂ ಬೆಳೆದಿದೆ ನಮ್ಮ ಸಾಧನಾ ಪಟ್ಟಿ...
ಕೇಳಲು ಮಾಡಿಕೊಳ್ಳಬೇಕಷ್ಟೇ
ನಾವು ನೀವು ಹೃದಯ ಗಟ್ಟಿ...

ವೇದಿಕೆಯಲ್ಲಿನ ವಿಚಾರವಂತರೇ ನೀಡುವಿರಾ
ಸಾಧನೆಗೆ ಒಂದು ಹೊಸ ಪರಿಕಲ್ಪನೆ...
ತುಂಬುವಿರಾ ಈ ನರಸತ್ತವರಲ್ಲಿ
ಸ್ವಾತಂತ್ತ್ರ್ಯದ ಸುಂದರ ಕಲ್ಪನೆ...


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X