Get Updates
Get notified of breaking news, exclusive insights, and must-see stories!

ನಾ ಕಂಡ ಬದುಕು

  • ಎಸ್‌.ಎಲ್‌.ಸುರೇಂದ್ರ ಕುಮಾರ್‌, ತುಮಕೂರು
    [email protected]
ಬದುಕಿದೆ ಬದುಕಿದೆ ಬೇಕಂದೆ ಬದುಕಿದೆ
ನೋಡಬೇಕಂದೆ ಬದುಕಿದೆ
ಸತ್ತ ಕನಸನೊತ್ತ ಸ್ಮಶಾನದಡೆಯಲ್ಲಿ
ನಕ್ಕು ನಗಿಸೆಂದು ಹೇಳುವ ಸುಳ್ಳು ಮನಸ್ಸಿನ ತೆಕ್ಕೆಯಲಿ
ಹಸಿದ ಹೊಟ್ಟೆಯ ಮದ್ಯದಲಿ

ಹೊಟ್ಟೆ ತುಂಬಿದ ಜನರ ಮದ್ಯದಲಿ
ಹಸಿದ ಹೊಟ್ಟೆಯ ತೋರದೆ ಬದುಕಿದೆ
ಹಪಾ ಹಪಿ ಹಸಿದವರ ಮದ್ಯದಲಿ
ಹೊಟ್ಟೆ ತುಂಬಿದ ನೆಪವ ಹೇಳಿ ಬದುಕಿದೆ.

ನಕ್ಕು ನಲಿವ ಈ ಜನರ ಮದ್ಯದಲಿ
ನನ್ನೆಲ್ಲ ನೋವ ನುಂಗಿ ಬದುಕಿದೆ
ನೋವುಂಡು ನೋವಿನಲೆ ಮಲಗಿದವರ ಮದ್ಯದಲಿ
ನಾನು ನಕ್ಕು ನಗಿಸುವವನಂತೆ ನಟಿಸಿದೆ.

ಆಗಾರ್ಭ ಶ್ರೀಮಂತ ಸಿರಿವಂತರೊಳಗೆ
ಬಟ್ಟಿಗಿಲ್ಲದ ಬಡತನವನು ತೋರದೆ ಬದುಕಿದೆ
ಬದುಕಲಾಗದೆ ಜೀವವು ಬುಡ ಮೇಲಾಗಲಿ
ಎನ್ನುವವರ ಮದ್ಯದಲಿ
ಶ್ರೀಮಂತ ಸಿರಿವಂತರದು ತೋರಿಕೆಯಷ್ಟೆ ಎಂದು ಸಂತೈಸಿದೆ.

ಬೆವರಳಿದು, ಕೊರೆದು, ನೆನೆದು ದುಡಿವವರೊಳಗೆ
ಕಡು ಕಷ್ಟವನ್ನರಿಯದ ಸುಖಿಯಂತೆ ಭಾವಿಸಿದೆ
ಸುಖದ ಸುಪ್ಪತ್ತಿಗೆಯಲಿ ಮಲಗಿ ಮೈ ಬಗಿಸುವುದನು ಮರೆತವರೊಳಗೆ
ದುಡಿಮೆಯಲ್ಲೆ ಮರೆತು ಮೆರೆಯುತ ನಾನು ಬದುಕಿದೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+