ಬಂಜೆಯ ಹಾಡು
ನನ್ನ ಈ ಕವನ, ಮಕ್ಕಳಿಲ್ಲದ... ತಾಯಿಕರುಳಿನ ವನಿತೆಯರಿಗೆ ಅರ್ಪಣೆ
- ಸೋಮು, ಬೆಂಗಳೂರು
[email protected]
ಅರಮನಿಯಾಗ್ ಕೂತು ಮಾರಾಣಿಯಂಗ್
ಮೆರಿಯೋ ದರ್ದು ನನಗಿಲ್ ನೋಡು..
ನಾ ಯೇನ ಸೋನ ಚಾಂದಿ ಬೇಡಿದ್ನೇನು
ಇವತ್ತಿದ್ ನಾಳಿ ಮಣ್ಣಾಗ್ ಮಣ್ಣಾಗಿ
ಹೋಗೊ ಗರ್ತಿ ಇದ್ದೀನ್ ನಾನು..
ನಾ ಕೇಳಿದ್ದೊಂದ.....ಬೇಡಿದ್ದೊಂದ ನಿನಗ
ಶಿವನಾ ನನ್ ಮಡ್ಲಾಗ ಒಂದು ಕಂದಮ್ಮನನ್ನ ಹಾಕೊ......
ಸುತ್ ಮುತ್ ಹತ್ತ್ ಹಳ್ಯಾಗ
ಹೇಳ್ಲಿಕ್ ಹತ್ಯಾರಂತ...ಮ್ಯಾಗಿನ್ ಮನಿ
ಸೀತಮ್ಮನ್ ಸೊಸಿ ಬಂಜೆ ಅಂತ...
ಮೊನ್ನಿ ಕೂಡ ಶಾರ್ದಕ್ಕನ ಮನಿಯಾಗ ಲಕ್ಷ್ಮಿ
ಪೂಜೆ ಇತ್ತು.. ಪುಣ್ಯಾತ್ ಗಿತ್ತಿ ನನ್ ಹಣಿ ಮ್ಯಾಗ
ಒಂದು ಬೊಟ್ಟು, ಕುಂಕುಮ ಇಡ್ಲಿಲ್ಲ..ನೋಡು
ನನ್ ಮಡ್ಲಾಗ ನಾಲ್ಕ್ ಅಕ್ಕಿ ಕಾಳ್ ಹಾಕ್ಲಿಲ್ ನೋಡು
ಅದ್ಕಾ ನಾನ್ ಕೇಳಿದ್ದು ಶಿವನಾ ನನ್ ಮಡ್ಲಾಗ ಒಂದು ಕಂದಮ್ಮನನ್ನ ಹಾಕೊ.....
ಊರ ಗರತೇರ ಮಡ್ಲಾಗ್ ನೋಡಲ್ಲಿ
ಬೆಳ್ಳಿ ಚಂದ್ರಾಮನಂಗ ಕಂದ ನಗುತಾನ
ನೀರ್ ತರೋಣಾಂತ ಹೊರಾಗ್ ಹೋದ್ರ..
‘ಏನ್ ತಂಗೀ ನಿನ್ ಹೊಟ್ಟಿ ಸಣ್ಣಾಕೈತಿ
ಇನ್ನು ಉಂಡಿಲ್ಲೇನ’ ಅನ್ಕೋತ ಮಂದಿ ನಗತಾರ
ಗಂಡಾ ಆದೋನು ಹೊಟ್ಟಿ ಮ್ಯಾಲ್ ಒದಿತಾನ.......
ಅತ್ತಿ ಅಂತು ಕಣ್ಣಾಗ ಕೊಲ್ತಾಳ ನೋಡು...........
ನಾ ಬೇಡೋದ್ ಒಂದಾ ನಿನಗಾ-ಶಿವನೇ ನನಗ ಕಂದಾ ಬೇಕೋ
ಅಳ್ಲಿಕ್ ಕಣ್ಣಾಗ ಒಂದು ಹನಿ ನೀರಿಲ್ಲಿಲ್ಲಿ
ಆದ್ರ ಹಾಲ್ನಂತ ಕಂದನ ಮ್ಯಾಗ
ಆಸೆ ಉಕ್ಕುತೈತಿ ನೊಡ.. ಒಡಲಾಗ ಜಲಪಾತ ಐತೇನ?
ಮಾರಿ ಮ್ಯಾಗ ನಗೆ ಮೂಡಿ ಯೇಸ್ ದಿವ್ಸ ಆಯ್ತೋ
ಆದ್ರ ಮನದಾಗ ಆಸೆ ಬಳ್ಳಿ ಹಬ್ಬುತೈತಿ..... ಆಸರೆ ಆಕ್ತಿಯೇನ?
ಬಂಜಿ ಬಾಳ್ ಸಾಕಾಗೈತಿ, ಗಂಡನ ಒದಿ ಸಾಕಾಗೈತಿ
ಮತ್ತೊಮ್ಮಿ ಜೀವ ಬೇಡ್ಲಿಕ್ ಹತ್ತೈತಿ..
ಶಿವನಾ‰ ನನಗ ಕಂದ ಬೇಕೇ ಬೇಕಪ್ಪಾ ನನಗ
ಊರಿನ್ ಗರತೇರ ಮಾರಿಗ್ ಹೊಡಿಯೋದ್ ಬ್ಯಾಡೇನು!
ಅತ್ತೀಗ್ ನಾ ಉತ್ರಾ ಕೊಡೋದ್ ಬ್ಯಾಡೇನು!
ಊರಾಗ ನಾ ಮಾರಿ ಎತ್ತಿ ತಿರ್ಗಾಡೋದ್ ಬ್ಯಾಡ್ವೇನು!
ಮತ್ತ ಲಕ್ಶ್ಮಿ ಪೂಜ್ಯಾಗ ..ನನ್ ಹಣಿ ಮ್ಯಾಗ ಕುಂಕುಮಾ ಮೂಡೋದ್ ಬ್ಯಾಡ್ವೇನು!
ನನ್ ಮಡ್ಲಾಗ ನಾಲ್ಕ್ ಅಕ್ಕಿ ಕಾಳ್ ಬೀಳೋದ್ ಬ್ಯಾಡ್ವೇನು
ಶಿವನೇ ನಿನ್ ರಟ್ಟಿ ಹಿಡಿದ್ ಕೇಳ್ಲಿಕ್ ಹತ್ತೀನಿ ನನಗ ಒಂದು ಕಂದ ಬೇಕೋ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications