ನನ್ನ ಅವಳ ಬೆಸುಗೆ
- ಯೋಗೇಶ್, ಬೆಂಗಳೂರು
[email protected]
ಚಳಿ, ಗಾಳಿ, ಮಳೆ ಸುರಿಯುತಿದೆ.
ಕೊಡೆಹಿಡಿದು, ಮನೆ ತೊರೆದು,
ನಡು ಬೀದಿಯಲಿ ಸಾಗುತಿರೆ,
ಮೋಡ ಕವಿದು, ಗುಡುಗು ಬಡಿದು,
ಜೋರಾಯಿತು ಮಳೆಧಾರೆ!.
ಕೊಂಚ ದುಗುಡ ಮನದಲ್ಲಿ,
ಕೊಡೆಹಿಡಿದು ಎರಡು ಕೈಯಲ್ಲಿ,
ನಡೆದೆ ದಾರಿ ನೋಡುತಲಿ.
ಸುಡು ಸೂರ್ಯ ತಂಪಾಗಿ, ಬಾನೆಲ್ಲ ಕಪ್ಪಾಗಿ,
ವೇಳೆ ತಿಳಿಯದೆ, ಕಾದೆ ಬರುವ ಗಾಡಿಗಾಗಿ.
ಆ ಗಾಳಿ, ಮಳೆ, ಚಳಿಗೆ, ಮನದೊಳಿಲ್ಲ ಹೊ ನಗೆ.
ಮನೆ ತೊರೆದೋಗಿದ್ದಳೆನ್ನಾಕೆ, ತನ್ನ ತವರೂರಿಗೆ.
ಬರಲಿಲ್ಲ ಗಾಡಿ ಬರಲಿಲ್ಲ,
ಮನವೇಕೊ ಹಿಂಜರಿಯಲಿಲ್ಲ,
ಮಳೆರಾಯ ಛಲ ಬಿಡಲಿಲ್ಲ.
ಅದಾಗಲೆ ಸಮಯ ಮೀರಿತ್ತು,
ಬಾರದ ಗಾಡಿಗೆ ಕಾದು ಸಾಕಾಗಿತ್ತು,
ಕ್ಷಣದಿ ಜನರ ಗುಂಪು ಕಂಡಿತು,
ಗಾಡಿ ಊರ ಬಾಗಿಲಲ್ಲಿ ಕೆಟ್ಟು ನಿಂತಿತ್ತು!
ಬೇಸರದ ಛಾಯೆ ಆವರಿಸಿ, ಅವಳಿಲ್ಲದೆ ಮನಸು ಕಾತರಿಸಿ,
ಇಷ್ಟೊತ್ತು ಕಾದ ನನಗೆ-
ಪ್ರಕೃತಿಯೆ ಕಂಡು ಅಣುಕಿಸಿ, ನಕ್ಕಿತು ಮುಸಿ, ಮುಸಿ...!
ಯಾರೊ ಬರುವ ಹಾಗೆ, ನೋಡಿ ನಿಂತೆ ಹಾಗೆ,
ತೋಯ್ದು ತೊಪ್ಪೆಯಾಗಿ ಬಂದದ್ದು ನನ್ನಾಕೆ!!
ಕೊಡೆಯಿಲ್ಲ ಅವಳಲ್ಲಿ, ಚಳಿತಾಳದೆ ಬಳಲುತಲಿ,
ತವರು ತೊರೆದು ಬಂದಿಳಿದಿದ್ದಳು ಊರ ಬಾಗಿಲಲ್ಲಿ!
ಹೊರಟಿದ್ದೆ ನಾ ನಲ್ಲಿಗೆ, ಬಂದಾಯ್ತು ಅವಳಿಲ್ಲಿಗೆ.
ಉಸಿರಿಗೆ, ಉಸಿರಾಗಿರುವಾಕೆಗೆ, ಕೊಡೆ ಹಿಡಿದೆ ಮೆಲ್ಲಗೆ!
ಚಳಿ, ಗಾಳಿ, ಮಳೆ, ಸುಡು ಸೂರ್ಯ!
ಆಕೆ ಜೊತೆ ಇದ್ದರೆ ಎಲ್ಲವೂ ಮಂಗ ಮಾಯ!
ಇರಲಿಲ್ಲ ಆಕೆ ಐದು ದಿವಸ-
‘‘ಬರಡು ಭೂಮಿಗೆ ಹಸಿರೆಲ್ಲಿ?’’
ಆಕೆ ಕಾಣದೆ ಮನ ತವಕ ಗೊಂಡಿದೆ-
‘‘ಹುಡುಕಾಡಿದೆ ದುಂಬಿ ಹೂವೆ ಕಾಣದೆ ಬನದಲ್ಲಿ!’’
ಮನೆಯ ಮೌನ ದೂರ ಮಾಡಿ, ಮನೆಯ ದೀಪ ಆಕೆ ಹಚ್ಚಿ,
ಗೆಜ್ಜೆನಾದ ಕೇಳಿ ಬರಲು, ಸ್ವರ್ಗಬಂದಿಳಿಯಿತೆನ್ನ ಮನೆಗೆ!,
ಇದೇ !!!
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications