ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಳಿ ಬಣ್ಣ ನೆಪಮಾತ್ರವಣ್ಣ

By Staff
|
Google Oneindia Kannada News
  • ಎಸ್‌.ಎಲ್‌.ಸುರೇಂದ್ರ ಕುಮಾರ್‌, ತುಮಕೂರು.
    [email protected]
ಬಣ್ಣ ಬಣ್ಣ
ಬಣ್ಣ ಬಣ್ಣ ಎಲ್ಲಿ ನೋಡಿದರು ಬಣ್ಣ
ಬಣ್ಣ ಬಣ್ಣ ಇಲ್ಲಿ ಎಲ್ಲಾ ಬಣ್ಣವಣ್ಣ
ಬಣ್ಣ ಬಣ್ಣ ಹಾಕು ನೀನು ಕೂಡ ಬಣ್ಣ
ಬಣ್ಣದಲಿ ಮುಳುಗಿ ಮರಿಬೇಡ ನಿನ್ನ ಬಣ್ಣ

ಬಣ್ಣ ಬಣ್ಣ
ರಂಗು ರಂಗಿನ ರಂಗಾದ ಬಣ್ಣ
ಆಸೆ ಹಂಚುವ ಅಂದದ ಬಣ್ಣ
ಚೆಲ್ಲು ಚೆಲ್ಲಿನ ಚೆಲ್ಲಿದ ಬಣ್ಣ
ಎಲ್ಲಿ ನೋಡಿದರು ಕಾಣುವುದು ಬಣ್ಣ

ಬಣ್ಣ ಬಣ್ಣ
ನನ್ನ ಮನದೊಳೆಗೆ ನಿನ್ನೆದೆಯ ಬಣ್ಣ
ನನ್ನೀ ಕಣ್ಣೋಳಗೆ ನಿನ್ನ ಕನಸಿನದೆ ಬಣ್ಣ
ಕನಸೊಳಗೆ ತುಂಬಿಹುದು ನೆನಪುಗಳ ಬಣ್ಣ
ನೆನಪುಗಳು ಹೊಳೆಯಲು ಕಾರಣ ನಿನ್ನ ಬಣ್ಣ

ಬಣ್ಣ ಬಣ್ಣ
ಬಾನ ನೋಡುತ್ತಿದ್ದರೆ ಬೆಳದಿಂಗಳ ಬಣ್ಣ
ಬುವಿಯಲ್ಲಾಡುತ್ತಿದ್ದರೆ ಭೂತಾಯ ಬಣ್ಣ
ಅವನೆದೆಯಾಳಗೆ ಅವಳಿದ್ದಾಗ ಪ್ರೀತಿಯ ಬಣ್ಣ
ಜೋಡಿಯಕ್ಕಿಯಾಗಿರಲು ಕಾಣುವುದಾಗ ಸ್ವರ್ಗದ ಬಣ್ಣ

ಬಣ್ಣ ಬಣ್ಣ
ಜಗವೆಲ್ಲ ಕಾಣುತಿಹುದು ತಮ್ಮಿಷ್ಟದ ಬಣ್ಣ
ಜನರೊಳಗೆ ತುಂಬಿಹುದು ಆಸೆ ಕಣ್ಣಿನ ಬಣ್ಣ
ಎಲ್ಲರಲು ಇಲ್ಲಿ ಕಾಣುತಿಹುದು ತೋರಿಕೆಯ ಬಣ್ಣ
ಬಿಡದೆ ಎಲ್ಲರ ಬದುಕೊಳಗೆ ಇಣುಕುವುದು ಭಾವನೆಗಳ ಬಣ್ಣ


  • ಹೋಳಿಯ ರಂಗು...
  • ಮುಖಪುಟ / ಸಾಹಿತ್ಯ-ಸಂಸ್ಕೃತಿ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X