ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪಿಗೆಯಾದರೆ...

By Staff
|
Google Oneindia Kannada News
ನೀ ನಡೆವ ಹಾದಿಯಲ್ಲೆಲ್ಲ
ಹೂ ಹಾಸುವುದು...
ನನ್ನಿಂದಾಗದು
ಬೇಕಾದರೆ
ಹೆಜ್ಜೆಗೊಂದು ಜೋಕು ಹೇಳುತ್ತೇನೆ

ಗಂಟೆಗಟ್ಟಲೇ ಪಕ್ಕ ಕೂತು
‘ಸ್ವೀಟ್‌ ನಥಿಂಗ್‌’ ಮಾತಾಡಲಾರೆ
ಬೇಕಾದರೆ
ನಿನ್ನ ಕೂದಲಲ್ಲಿ ಬೆರಳಾಡಿಸುತ್ತೇನೆ

ನಿನ್ನ ಹುಟ್ಟುಹಬ್ಬಕ್ಕೆ
ಮುತ್ತಿನ ಹಾರ ವಜ್ರದ ಓಲೆ
ಉಡುಗೊರೆ ತರಲಾರೆ...
ಬಡಕವಿ ನಾನು
ಬೇಕಾದರೆ
ನಿನ್ನ ಮೇಲೆಂದೂ
ಕೋಪ ತೋರಲಾರೆನೆಂದು
ಮಾತು ಕೊಡುತ್ತೇನೆ
ಅದರಂತೆ ನಡೆಯುತ್ತೇನೆ

ನಿನ್ನ ಹೆಸರಲ್ಲೊಂದು ಸೈಟು ಮಾಡಿ
ಮಹಡಿಮನೆ ಕಟ್ಟಿಸಿ
ನಿನ್ನ ಹೆಸರಿಡಲು...
ಬಹುಷಃ ಸಾಧ್ಯವಾಗಲಾರದೇನೋ
ಬೇಕಾದರೆ
ನಿನ್ನ ಹೆಸರನ್ನು
ನನ್ನ ಕಾವ್ಯನಾಮವನ್ನಾಗಿಸಿಕೊಳ್ಳುತ್ತೇನೆ
ಬಾ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X