ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಃಖಕಾಂಡ

By Staff
|
Google Oneindia Kannada News
ದುಃಖಭರಿತ ಲೋಕದಲ್ಲಿ
ಅತ್ತು ಅತ್ತು ಜನ್ಮ ತಳೆದೆ

ದುಃಖರತ್ನತೊಟ್ಟಿಲಲ್ಲಿ
ಜೋಗುಳವ ಕೇಳಿ ನಲಿದೆ

ದುಃಖಧೂಳುಬಯಲಿನೊಳಗೆ
ಬಾಲ್ಯವನ್ನು ಆಡಿ ಕಳೆದೆ

ದುಃಖವನ್ನೇ ಪ್ರೀತಿ ಮಾಡಿ
ಯುೌವ್ವನದ ಮುತ್ತ ಸವಿದೆ

ದುಃಖಕಡಲಿನಾಳದಲ್ಲಿ
ಸಂಸಾರದರ್ಥ ಕ್ಲೇಶ ತಿಳಿದೆ

ದುಃಖದೊಳಗೆ ಲೀನವಾಗಿ
ಆಯುರ್ಮಾನವೆಲ್ಲ ಸವೆದೆ

ದುಃಖಕ್ಕಿಂತ ಮಿತ್ರನ್ಯಾರು?
ದುಃಖಕ್ಕಿಂತ ಬಂಧು ಯಾರು?

ದುಃಖವನ್ನೇ ಪೂಜೆಗೈದು
ದುಃಖದಿಂದ ಮುಕ್ತಿ ಪಡೆದೆ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X