ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲೆಂಡರ್‌ ದೆವ್ವ!

By Staff
|
Google Oneindia Kannada News
  • ಮಂದಾರ ರಾ. ಮುತಾಲಿಕದೇಸಾಯಿ, ಬೆಂಗಳೂರು
    [email protected]
ಒಂದು ಕೆಟ್ಟ ಕನಸು ಬಿದ್ದು
ನಸುಕಿನ್ಯಾಗ ನಾಲ್ಕಕ್ಕǚ ಎಚ್ಚರಾಗಿತ್ತು
ಹೊಳ್ಳಿ ಮಲಗೋ ಧೈರ್ಯ ಆಗಲಿಲ್ಲ
‘‘ಮತ್ತ ಅದǚ ಕನಸು ಬಿದ್ಬಿಟ್ರ?’’
ಅಂತ ಹೆದರಿಕ್ಯಾಗಿತ್ತು

ಈ ನನ್ನ ಕನಸಿನ್ಯಾಗ
ನಮ್ಮೂರ ಚೌಡಿ ದೆವ್ವ ಬಂದಿತ್ತು
ಅದು ನನ್ನ ಕುತ್ತಿಗಿ ಹಿಚುಕಿದ ಹಾಂಗ
ನನ್ನ ನೋಡಿ ಕೇಕಿ ಹಾಕಿದ ಹಾಂಗ
ನನಗ ಭಾಸ ಆಗಿತ್ತು

ಜೋರಾಗಿ ಒದರೋಹಾಂಗಾತು
ಖರೆ ಅಂಗಳೆಲ್ಲ ಒಣಗಿ ಹೋಗಿತ್ತು
ಕೈಕಾಲರೆ ಹೊಡದ್ಯಾಡೋಣು ಅಂತಂದ್ರ
ಹಗ್ಗದ್ಲೆ ಬಿಗಿಯಾǚಗಿ ಮಂಚಕ್ಕ
ಕಟ್ಟಿ ಹಾಕಿದ ಹಾಂಗಾಗಿತ್ತು

ಥಟ್ಟನೆ ಎದ್ದು ಕೂತಾಗ
ದಿಗಿಲು ಬಡೆದ ಹಾಂಗಾಗಿತ್ತು
‘‘ಏǚ ಕನಸೋ ಮಾರಾಯಾ! ಕೆಟ್ಟ ಕನಸು ಅಷ್ಟೇ’’
ಅಂತ ಅರಿತುಕೊಂಡು, ರಮಿಸಿಕೊಂಡಾಗನǚ
ಹೊಸ ವಿಚಾರ ಬಂದಿತ್ತು

ಕಣ್ಣೆತ್ತಿ ನೋಡಿದೆ, ಗೂಟಕ್ಕೊಂದು
ಕ್ಯಾಲೆಂಡರ್‌ ಜೋತು ಬಿದ್ದಿತ್ತು
ಸೂಸ ಗಾಳಿಯಾಳಗ ಅತ್ತಿತ್ತ ತೂಗಿಕೋತ
‘‘ಲೇ! ಕಾಲ ನಾನǚ ನಿರ್ಣಯಿಸ್ತೀನಿ’’
ಅಂತದು ರಕ್ಕಸ ಹೂಡಿತ್ತು

ಕಾಲ ಜಂಗಮ, ಕಾಲನǚ ಮೂಲ
ನಾವಿದನ್ನ ತಿಳಕೊಂಡಿದ್ರ ಸಾಕಾಗ್ತಿತ್ತು
ಹುಂಬ ಎತ್ತಿಗೆ ಮೂಗುದಾರ ಹಾಕೋ ಪರಿ
ಕ್ಯಾಲೆಂಡರ್‌ ತಯಾರ ಮಾಡಿಕೊಂಡು
ಕಾಲ ನಿರ್ಣಯಿಸೋ ಅಗತ್ಯ ಏನಿತ್ತು?

ಟೈಮ್‌-ಟೇಬಲ್ಲಿನ ಬದುಕಿನೊಳಗ
ಕ್ಯಾಲೆಂಡರ್‌ ಜೀವನಾನ್ನǚ ಕಳೆದು ಹಾಕಿತ್ತು
ಮಂಡೇ ದಿಂದ ಸಂಡೇ ತನಕ ಏಳು ದಿನಗಳ ವ್ಯಾಖ್ಯಾನ
ಮ್ಯಾಲೆ ಯಾವತ್ತ, ಏನು, ಹೆಂಗ ಅನ್ನೋ
ಡಂಗುರ ಬ್ಯಾರೆ ಸಾರಿತ್ತು

ಎಂದಿನ ಹಾಂಗ ಗೊತ್ತಿರದǚನ
ಮೂರ್ಖತನ ಪದರಿಗೆ ಬಿದ್ದಿತ್ತು
ಕಾಲ ನಿರ್ಣಾಯಕರ ಕೈ ಕ್ಯಾಲೆಂಡರ್‌ ಬರೆದು
‘‘ಅಯ್ಯೋ ಪಾಪ! ಬೆತ್ತಲೆ ಆಕಾಶ’’ ಅಂತ
ಅದಕ್ಕ ಅಂಗಿ ಹೊಲಿತೀನಂದಿತ್ತು

ಮನಸ್ಸಿನ ಸ್ವಾತಂತ್ರ್ಯದ ಕುತ್ತಿಗೀನ್ನ
ಕಾಲದ ಹಾಳು ನಿರ್ಣಯ ಹಿಚುಕಿತ್ತು
ಹೋದಲ್ಲೆಲ್ಲ ಬೆನ್ಹತ್ತಿ ಕಾಡಿ, ತೂಗಿ ರಕ್ಕಸ ಮಾಡೋ
ಕ್ಯಾಲೆಂಡರ್‌ ಒಂದು ಭಯಂಕರ
ದೆವ್ವ ಆಗಿ ಬಿಟ್ಟಿತ್ತು

ಜೋರಾಗಿ ಅಳೋೕಹಾಂಗಾತು
ಖರೆ ಅಳೋ ಧೈರ್ಯನೂ ಹೋಗಿತ್ತು
ಕೈಕಾಲರೆ ಹೊಡದ್ಯಾಡೋಣು ಅಂತಂದ್ರ
ಬಿಗಿಯಾǚಗಿ ಹಾಳು ಬದುಕಿನೊಳಗ
ಜೀವನǚನ ಸೆರೆ ಹೊಂದಿತ್ತು

ಈ ಕ್ಯಾಲೆಂಡರ್‌ ದೆವ್ವ
ಖಾಯಂ ಕಾಡೋ ಬೇತಾಳ ಆಗಿತ್ತು
ನಿದ್ದಿ ಕೆಡಿಸಿ ಕಾಡಿದ್ರೂ ಅಡ್ಡಿಯಿಲ್ಲ, ಭ್ರಮೆ ಅಷ್ಟೇ
ಆಗಿರೋ ನಮ್ಮೂರ ಚೌಡಿ ದೆವ್ವನǚ
ನನಗ ಎಷ್ಟೋ ಪಾಡನಿಸಿತ್ತು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X