ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೆಗೊಂಚಲು

By Staff
|
Google Oneindia Kannada News
ಸುತ್ತಮುತ್ತಲು ಹಸಿರು ತೊಟ್ಟಿಲು
ಮಾಮರದಿ ಕೋಗಿಲೆಯು ಕೂಗಲು
ನದಿಯ ತೀರದಿ ಅಲೆಯು ಕರೆಯಲು
ಎದೆಯ ತುಂಬಿತು

ದೂರ ಬಾನಲೊಂದು ಹಕ್ಕಿ
ಹಾರುತಿಹುದು ರೆಕ್ಕೆ ಬಿಚ್ಚಿ
ನೋಡುತಿರಲು ಭಾವ ಉಕ್ಕಿ
ಹಾಡುವಾಸೆ ಮನವ ಬಿಚ್ಚಿ

ಅಂಗಳದಿ ಮಲ್ಲಿಗೆ ಬಳ್ಳಿ
ಹೂ ಬಿರಿದು ಪರಿಮಳ ಚೆಲ್ಲಿ
ತೇಲಿಬರಲು ತಂಪಿನ ತಂಗಾಳಿ
ಕೇಳುವಾಸೆ ನಾದ ಮುರಳಿ

ಚಂದಿರನು ಮೂಡಿದ ರಾತ್ರಿ
ಧರೆಗಿಳಿದ ಚಂದ್ರಿಕೆಯಾಗಿ
ತಾರೆಗಳ ಜೊತೆಯಲಿ ಮೈತ್ರಿ
ಆಡುವಾಸೆ ಚಕೋರಿಯಾಗಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X