Get Updates
Get notified of breaking news, exclusive insights, and must-see stories!

ಹಳೆಯದಾಗುವ ಮುನ್ನ ಹೊಸತಲ್ಲವೆ!

  • ಎಸ್‌.ಎಲ್‌. ಸುರೇಂದ್ರಕುಮಾರ್‌, ತುಮಕೂರು.
    [email protected]
ಹೊಸತನ ಹೊಸತನ ಯಾವಾಗಲು ಹೊಸತನ
ಹೊಸ ಜಗವಿದುವೆ ಹೊಸಜನರಿವರು
ಹೊಸ ಕಾಲ ಬದುಕು
ಹೊಸತು ಹೊಸತು ಎಲ್ಲಾ ಹೊಸತು ಯಾವಾಗಲು

ಹೊಸನೋಟ ಹೊಸ ಪಾಠ
ಹೊಸರಾಗ ಹೊಸ ಹಾಡು
ಹೊಸ ಮನಸು ಹೊಸ ಕನಸು
ಹೊಸ ಹಗಲು ಹೊಸ ಇರುಳು

ಪ್ರತಿ ನಿಮಿಷ ಪ್ರತಿ ದಿವಸ ಪ್ರತಿಯಾಂದು
ಹಳೆಹಾದಿ ಮರೆತು ಹೊಸದಾಗಿ ಹುಟ್ಟುವುದು
ಈ ಹುಟ್ಟೆ ಹೀಗೆ ಹೊಸದಾಗಿಯೇ ಹಳೆಯದಾಗುವುದು
ನಮ್ಮೆಲ್ಲರಿಂದಿನ ಹೊಸ ಮುಖ ನಾಳಿನ ಹಳೆಯದು

ಈಗಿನ ಹೊಸ ನೋಟ ಹಳೆಯದಾಗಿರುವುದು ಮರುಕ್ಷಣದಲಿ
ಮರೆತೆವಾದರೆ ಈ ಸತ್ಯವನು ನಾವಾಗ ಹಳಬರು
ಹಳೆಯ ನೆನಪುಗಳು ಹೊಸತಾಗಿಯೆ ಬರುವವು
ಹೊಸದೊಂದೊಷ್ಟು ಆಕಾಂಕ್ಷೆಗಳನು ಹೊತ್ತು

ಹೊಸಗಾಳಿ ಹೊಸ ಬೆಳಕು
ಹಾಸು ಹೊಕ್ಕಲಿ ಹೊಸ ದಿಗಂತದಲಿ
ಹೊಸ ರೂಪ ಹೊಸ ಭಾವ ಕಾಡುವವೆಲ್ಲರಿಗು
ಹೊಸತೆಂಬುದಕ್ಕೆ ಕೊನೆ ಮುಗಿಲಿಲ್ಲ

***

ಎದೆಯಾಳಗಿನ ಹಾಡು

ಹೊಸಗಾಳಿ ಹೊಸಬೆಳಕು ಹರಿದು ಬರಲಿ
ತೆರೆಯಿರಿ ತಮ್ಮೆಲ್ಲರೆದೆಯ ಕಿಟಕಿ ಬಾಗಿಲುಗಳನು
ಹೊಸನೀತಿ ಹೊಸರೂಪ ಹೊಸ ಬಿಂಬವಾಗಿ
ಹೊಸ ಶಕ್ತಿ ಹೊಸ ಯುಕ್ತಿ ಹೊಸ ಜ್ಞಾನದಿಂದ
ಹೊಸಗಾಳಿ ಹೊಸ ಬೆಳಕು ಕೂಡಿ ಬರಲಿ

ನಾವಿರುವುದಿಷ್ಟೆ ನಮ್ಮ ಸುತ್ತಲಿನಷ್ಟೆ ಜಗವು ಅಲ್ಲ
ನಾವು ಕಾಣುತಿರುವುದೆಲ್ಲ ಸಹಜ ಸತ್ಯವಲ್ಲ
ಅಡಗಿಹುದು ಇನ್ನು ನಾವು ಕಾಣುವ ಭಾವನೆಗಲ್ಲಿ
ಕಾಣಬೇಕಾದರೆ ನಾವು ಕಂಡ ಬದುಕಿಗಿಂತ ಮಿಗಿಲಾದುದ
ಎದೆಯಾಳಗಿನ ಕಣ್ತೆರೆದು ನೋಡಬೇಕು ಭವ್ಯತೆಯಲಿ

ಆತಂಕ ಅನವಶ್ಯ ಕಿತ್ತೊಗೆದು ಬಿಡು ಅಗೋಚರಕೆ
ತೂಗದಿರು ಯಾರನು ಅಪನಂಬಿಕೆಯ ತಕ್ಕಡಿಯಲಿ
ತೂಗುವುದಾದರೆ ತೂಗಿಬಿಡು ನಂಬಿಕೆಯ ಉಯ್ಯಾಲೆಯಲಿ
ಬದುಕಲೆಲ್ಲರನು ಪ್ರೀತಿಸು ಎಲ್ಲರನು ಭಾವಿಸು
ಬದುಕಿನೆಲ್ಲರೊಳಗೆ ಬೆರೆತು ಬಯಸು ಎಲ್ಲರಿಗು ಒಳಿತು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+