ನಾಡಿನ ಸ್ಥಿತಿ
- ತ.ವಿ.ಶ್ರೀನಿವಾಸ್, ಮುಂಬಯಿ
[email protected]
ಕುಲ ಪುರೋಹಿತರ ಕನಸಿನ ಬೀಡು
ಹೆಮ್ಮೆಯ ವಿಜಯನಗರದ ದ್ಯೋತಕ
ಅಂದು ಆಗಿದ್ದ ವಿಶಾಲ ಕರ್ನಾಟಕ
ಹೊಯ್ಸಳ ಬೆಳೆಸಿದ ಬೇಲೂರು
ಅರಸರಾಳಿದ ಮೆಚ್ಚಿನ ಮೈಸೂರು
ಹೊಸೂರು ಕಾಸರಕೋಡುಗಳ ತವರು
ಸೋಲಾಪುರ ಆದೋನಿಗಳು ಪ್ರಿಯರು
ಕೋಲಾರ ಹಟ್ಟಿಗಳ ಚಿನ್ನದ ಗಣಿಯು
ಕಾವೇರಿ ತುಂಗೆ ಕೃಷ್ಣೆಯರ ಖನಿಯು
ಹುಬ್ಬಳ್ಳಿ ಮೈಸೂರು ಸಂಸ್ಕೃತಿಯ ಸೊಗಡು
ಎಂದೆಂದಿಗೂ ಆಗದು ಈ ನಾಡು ಬರಡು
ಇಂದು ಹರಿದು ಹಂಚಿರುವ ದೇಶವೀ ಕೊಂಪೆ
ಅಗೋ ನೋಡು ಒಮ್ಮೆ ಮೆರೆದ ಹಾಳು ಹಂಪೆ
ಇನ್ನು ಅಳಿದುಳಿದಿರುವುದು ಚೂರು ಪಾರು
ಅದಕ್ಕಾಗಿಯಾದರೂ ಹರಿಸೋಣ ನಮ್ಮ ಬೆವರು
ಉದರ ಪೋಷಣೆಗೆಂದು ಬರುತಿಹರು ಇತರರು
ಚಿಗುರಿದೊಡನೇ ನಡೆಸುವರು ನಮ್ಮ ಮೇಲೆ ಕಾರುಬಾರು
ಪರರ ಕೈಗೆ ಕೊಡಲು ಬೇಡ ಉಳಿದಿರುವುದು
ಸೆರಗೊಳಗೆ ಕಟ್ಟಿದ ಕೆಂಡ ನಮ್ಮನ್ನೇ ಸುಡುವುದು
ಹಿರಿಯರು ಕಟ್ಟಿದ ನಾಡು ಪರರ ಪಾಲಾಗುವುದು ಸರಿಯೇ
ನಮ್ಮ ಪಾಲಿಗೆ ಎಂದಿಗೂ ಇರುವನು ಶ್ರೀ ಹರಿಯೇ
ದೇಶದ ಉಳಿವಿಗಾಗಿ ನಾವಿಂದು ತೊಡೋಣ ಪಣ
ಅದಕ್ಕಾಗಿ ಹೋರಾಡುವವರ ಕೈ ಜೋಡಿಸೋಣ
ಗತ ವೈಭವದ ಗುಂಗಲೇ ಇನ್ನೂ ಕಾಲ ಕಳೆಯುವುದು ಬೇಡ
ನಾವೆಲ್ಲಾ ಸೇರಿ ಒಂದಾಗಿರಲು ಯಾರೂ ತೊಂದರೆ ಕೊಡ
ವಿಶಾಲ ಕರ್ನಾಟಕದ ಭೂಪಟ ವಿಸ್ತರಿಸೋಣ
ಅದಾಗಲಿ ನಮ್ಮ ಮುಖ್ಯ ಧ್ಯೇಯ ಓ ಜಾಣ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications