Get Updates
Get notified of breaking news, exclusive insights, and must-see stories!

ದೀಪಾವಳಿ

ಬರಲಿ ಬರಲಿ ತರಲಿ
ಶುಭವನು ಹಿಂತಿರುಗಿ
ಮಂದಿರ ಮನೆಮನಮಠಗಳಲಿ
ನಂದಾದೀವಿಗೆ ಬೆಳಗಿಸಲಿ
ರೈತನ ಕಣಜವ ತುಂಬಿಸಲಿ

ವರುಣನಿಗೆ ವಂದಿಸುವ ಕೊರುವ
ಮನ್ನಿಸೆಂದು ನಮ್ಮ ಪಾಪವ
ಯಾರೋ ಮಾಡಿದ ಪಾಪ ಇನ್ನಾರಿಗೊ ಶಾಪ
ಧೋ ಎಂದು ಸುರಿವ ಮಳೆಗೆ
ತೊಳೆಯಲಿ ಕಳೆಯಲಿ ಮಾಡಿದ ಪಾಪ

ಮನೆಗಳಲಿ ನಿಂತ ನೀರು ಇಂಗಲಿ
ಮನಮನಗಳಲ್ಲಿ ಭಕ್ತಿಭಾವ ತುಂಬಲಿ
ಮನ್ನಿಸಲಿ ಎಲ್ಲರ ನೋಡಲಾಗದು ದುಃಖವ
ಅತಿವೃಷ್ಟಿ ಅಸಮಾನತೆ ಸಮವರ್ತಿಯಾಗಲಿ
ತಮ್ಮತಮ್ಮ ನೆಲ ಹೊಲ ಮರಳಿ ಪಡೆಯಲಿ

ಬಂಧು ಕಳೆದುಕೊಂಡ ಜೀವಕ್ಕೆ ಸಾಂತ್ವನ ಸಿಗಲಿ
ದುಃಖದ ನೋವು ಬೇಗ ಮಾಯಲಿ
ರೋಗರುಜಿನಗಳು ಬಾರದಿರಲಿ
ಹಸನಾಗಲಿ ಕಳವಳ ತಣಿಯಲಿ ತಳಮಳ
ಚಿಗುರಲಿ ಭರವಸೆ ಎಲ್ಲರ ಬಾಳಲಿ

ಇದಕ್ಕಿಂತ ಹೆಚ್ಹೇನನು ಹರಸುವುದು
ಬರಲಿ ಬರಲಿ ತರಲಿ
ಶುಭವನು ಹಿಂತಿರುಗಿ
ಮಂದಿರ ಮನೆಮನಮಠಗಳಲಿ
ನಂದಾದೀವಿಗೆ ಬೆಳಗಿಸಲಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+