ಅಳಲು
- ಸ್ವರ್ಣ ಜ್ಯೋತಿ, ಪಾಂಡಿಚೆರಿ
[email protected]
ಹಸೀ ಮರಳಿನ ಮೇಲೆ ಬರೆದ
ನಿನ್ನ ಹೆಸರು
ಅಲೆಗಳ ಜತೆ
ತೇಲಿ ಹೋಗಿರಬೇಕು
ಒಂದು ಬೆರಳಿನಿಂದ
ಮಣ್ಣಗೋಡೆಯ ಮೇಲೆ ಬರೆದ
ನಿನ್ನ ಹೆಸರು
ತುಂತುರು ಹನಿಯೊಂದಿಗೆ
ಕರಗಿಹೋಗಿರಬೇಕು
ಆರಾಧನಾ ಕರಗಳಿಂದ
ಮನದ ಪುಟದ ಮೇಲೆ ಬರೆದ
ನಿನ್ನ ಹೆಸರು
ಬಂಡೆಯ ಮೇಲೆ
ಕೊರೆದ ಗೀರು
ಯಾರಿಗೂ ಕಾಣಲಿಲ್ಲ
ನೀನೂ ಅರಿಯಲಿಲ್ಲ
ಕೊನೆಗೂ ತಡೆಯಲಾರದೆ
ನಿನ್ನ ಕಣ್ಣ ಪಾಪೆಯಲ್ಲೊಂದು ಕಿಂಡಿ
ಕೊರೆದು ಒಳಹೊಕ್ಕು ನಿಂತಾಗ
ಎದುರಾದದ್ದು
ಬಟಾ ಬಯಲು ... ವಿಸ್ತಾರ ಸಹಾರಾ ...
ಇನ್ನೂ ಅಲೆಯುತ್ತಿದ್ದೇನೆ
ನಿನ್ನಾಸರೆಯ ತನಿನೆರಳು
ನಿನ್ನ ಹೆಸರಿನ ಸಿಹಿಖರ್ಜೂರದ
ಗುರಿಯನರಸಿ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications