ಅನಾಥ ಆಸೆ
- ಪ್ರೇಮಶೇಖರ, ಪಾಂಡಿಚೆರಿ
[email protected]
ನಿನ್ನಿರವಿನರಿವಿರಲೇ ಇಲ್ಲ ನನಗೆ
ನೀ ಮಲೆನಾಡ ಹುಡುಗಿ
ಹಸಿರುಸಿರಿನ ಬೆಡಗಿ
ನಾನೋ... ಹಚ್ಚ ಹಸಿರು ಕಾನನ
ದಂಚಿನಲ್ಲಿ ನಿಂತ ಒಂಟಿ
ಪರದೇಶೀ ಬೋಳುಮರ
ಅಂದು ಸಹ್ಯಾದ್ರಿಯ ಸೆರಗಿನಿಂದ
ನೀ ಹನಿ
ಹನಿಯಾಗಿ ತೇಲಿ
ಬಂದು ನಿಂತಾಗ ನನಗೆ ಕನಸು
ಹರಿಯುವ ಹೊತ್ತು
ಶತಶತಮಾನಗಳ ಕಾಯುವಿಕೆಗೆ
ತೆರೆ ಬಿತ್ತು ಅನಿಸಿತ್ತು
ಕನಸಿನಿಂದ ನನಸಿಗೋ
ಮತ್ತೊಂದು ಕನಸಿಗೋ ಜಾರಿ
ದಂಥ ಸುಷುಪ್ತಿಯಲ್ಲಿ ಮಿನುಗಿ
ದ ಅಗ್ನಿಯ ಸುತ್ತ ನನ್ನ
ಬೆನ್ನ ಹಿಂದೆ ಸಪ್ತ
ಪದಿ ತುಳಿದದ್ದು ನೀನೋ
ಅಥವಾ ಬರೀ ನನ್ನ ನೆರಳೋ?
ಅರಿವಾಗದೇ ಬೆರಗಾದೆ ಒಂದು ಕ್ಷಣ
ಮೈಮನಗಳ ಮಿಲನ
ದ ನನಸಿನಂಥಾ ಕನಸು
ಭೋರ್ಗರೆದುಕ್ಕಿದ ನೆರೆಗಂಗೆ
ಯಾಳಕ್ಕೆ ನನ್ನನ್ನು ಸೆಳೆದದ್ದು ನೀನೋ
ಅಥವಾ ಬರೀ ನಿನ್ನ ನೆನಪೋ?
ತಿಳಿಯದೇ ತೊಳಲಿದೆ ಒಂದುಕ್ಷಣ
ಬೆಳಗಾಗುವ ಹೊತ್ತಿಗೆ ಎಲ್ಲ ಮಳೆ
ಯ ಹಾಗೇ ನಿನ್ನ ಜೇನಹನಿ
ಮಳೆ ನಿಂತೇಹೋಗಿತ್ತು
ನೀ ನಾನಾಗಿ ನಾ ನೀನಾಗಿ ಮತ್ತೆ
ನೀ ನೀನೇ ನಾ ನಾನೇ ಆಗಿ
ಹೋದದ್ದು ಕಣ್ಣಂಚಿನಲ್ಲೇ ಕರಗಿ
ದ ಕನಸೆನಿಸುತ್ತಿತ್ತು
ಎದೆಯಲ್ಲಿ ಬಯಕೆ
ಯಾಂದು ಅನಾಥವಾಗಿ ಅತ್ತಿತ್ತು
ಈ ಬದುಕಿಗೆ ನೀನಲ್ಲದಿದ್ದರೂ
ನಿನ್ನಂಥವಳೊಬ್ಬಳು ಬೇಕಿತ್ತು
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications