ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂತರ್ಯ

By Staff
|
Google Oneindia Kannada News
ನನ್ನೊಳಗೂ ಹೊಳೆಯಿದೆ,
ಹೊಳೆದಂಡೆ ಮೇಲೆ ಹೊಂಬಾಳೆ ಬನವಿದೆ.
ಗೊನೆಗೊನೆ ತುಂಬ ಹಿಂಡು ಗಿಳಿಗಳಿವೆ.
ಹಸಿರು ಬನದೊಳಗೂ ಬದುಕು ಗೊನೆಯೊಳಗೂ ಅಡಗಿದೆ.

ಹೊಳೆಗೂ ಬೆಳಗಿದೆ,
ಬೆಳಗಿಗೆ ಥಳ ಥಳ ಹೊಳೆವ ಬೆರಗಿದೆ,
ಫಳಫಳಿಸುವ ನೀರಿಗೂ ಮಿರುಗುವ ಮೈಮನವಿದೆ
ಚೆಲುವು ನೀರೊಳಗೂ ಒಲವು ಹೊಳೆಯೊಳಗೂ ಅಡಗಿದೆ

ಹೊಳೆಗೂ ನೆರಳಿದೆ
ನೆರಳಿಗೆ ಹಕ್ಕಿಪಿಕ್ಕಿಗಳ ಹಳೇ ಗೂಡಿದೆ,
ಗರಿಗರಿಗಳ ತರಗಲೆಯಲಿ ಕಿರುಗೆಜ್ಜೆಗಳುಲಿದಿವೆ,
ಮರೆವು ನೆನಪೊಳಗೂ ಇರವು ಗೂಡೊಳಗೂ ಅಡಗಿದೆ !

ಹೊಳೆಗೆ ಸುಳಿಯಿದೆ,
ಸುಳಿಗೆ ರುಣಿರುಣಿಸುವ ಸೆಳೆತವಿದೆ,
ಹೊಳೆಯ ಕಲಕಲದಲಿ ಜೀವನಪ್ರೀತಿಯಿದೆ,
ಗತಿ ಪ್ರೀತಿಯೊಳಗೂ, ಭ್ರಾಂತಿ ಮನದೊಳಗೂ ಅಡಗಿದೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X