ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಟಿ

By Staff
|
Google Oneindia Kannada News
ಪುಟ್ಟಿ ಬಾಯಿಂದ ಜೊಲ್ಲ ಸುರಿತಿದ್ರೆ
ಸಿಹಿಸಿಹಿ ಜೇನ್‌ ತುಪ್ಪ !
ಬುಳು ಬುಳು ಅತ್ರೆ ಉದರ್ರಲ್ವೇನೋ
ಮುತ್ತು ರತ್ನ, ಬೆಪ್ಪ !

ಒಂದೋ ಎರಡು ಹಲ್ಲಿದ್ರೂನು
ಥಳ ಥಳ ಹೊಳೆಯಾ ಹವಳ !
ತುಟಿಗಳೆರಡು ತೊಂಡೆಹಣ್ಣು
ಮೆಲ್ಲದೆ ಇದ್ರು ಕವಳ !

ಕಪ್ಪಂದ್ರ ಕಪ್ಪು ಗುಂಗಿ ಹುಳ
ಜೋಡಿ ಎರಡು ಕಣ್ಣು !
ಕಾಮನ ಬಿಲ್ಲಿನಂಗ ಬಾಗಿದ ಹುಬ್ಬು
ನೋಡಿ ಸೈ ಸೈ ಅನ್ನು !

ಆ್ಞ ಉ್ಞ ಅಂತ ರಾಗಾ ತಗದ್ರೆ
ಕೋಗಿಲೆ ಕಂಠದ ಇಂಪು !
ಬೆಬೆ ಬೆಬೆ ಅಂತ ತೊದಲಿದ್ರೂನು
ಗಿಳಿಗಳ ಮಾತಿನ ಕಂಪು !

ಹಾಲು ಗಲ್ಲದ ಮ್ಯಾಲ ನೋಡು
ಇಷ್ಟೆ ಇಷ್ಟು ಬೊಟ್ಟು !
ಹುಣ್ವಿ ಚಂದ್ರ ವಸತಿ ಹೂಡ್ಯಾನ
ತಾರಾಲೋಕಾ ಬಿಟ್ಟು !

ಹಂಗಿಂಗಂತ ಎಷ್ಟಂತ ಮಾಡಲಿ
ಪುಟ್ಟ ವರ್ಣಾ !
ಒಮ್ಮೆ ಎತಗೊಂಡ ನೋಡ್ರಿ
ಹೊಡಿತಾಳ ನಿಮಗ ಕಣ್ಣಾ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X