ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಬೈ ಮಿಠಾಯಿ

By Staff
|
Google Oneindia Kannada News

ಎನ್ನುತ ಬರುವಳು ಕೋಲಿನ ಅಜ್ಜಿ !

ಗಿಲ್‌ ಗಿಲ್‌ ಗಿಲ್‌ ಗಿಲ್‌
ಹೆಜ್ಜೆಗೆ ಸರಿಸಮ
ಉಲಿಯುತ ನಲಿವವು ಕಟ್ಟಿದ ಗೆಜ್ಜಿ !

ಕೈಯಲಿ ವಾಚು
ಬೆರಳಲಿ ಉಂಗುರ
ಧರಿಸಿದ ಮಕ್ಕಳ ಹರುಷದ ನೋಟ !

ಕಿವಿಯಲಿ ಓಲೆ
ಮೊಳಕೈ ವಂಕಿ
ತರ ತರ ತೊಡುಗೆ ಕಣ್ಣಿಗೆ ಮಾಟ !

ಸಕ್ಕರೆ ಸಿಹಿಗೆ
ಇರುವೆಯ ತೆರದಲಿ
ಮುತ್ತಿವೆ ಮಕ್ಕಳು ಸಾಲಿಗೆ ಸಾಲು !

ಕೋಲಿನ ಅಜ್ಜಿಯ
ಪ್ರೀತಿಯ ಹೃದಯವು
ಬೆರೆಸಿದೆ ಮಮತೆಯ ಜೇನಿಗೆ ಹಾಲು !

ಅಕ್ಕರೆ ಮಕ್ಕಳು
ತಪ್ಪದೆ ಬರುವವು
ಮಿಠಾಯಿ ಕೊಳ್ಳಲು ಓಡೋಡಿ !

ತಂದವರಿರಲಿ
ತರದವರಿರಲಿ
ಕೊಡುತಲಿರುವಳು ಆಟಿಕೆ ಮಾಡಿ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X