Get Updates
Get notified of breaking news, exclusive insights, and must-see stories!

ತಿಳಿದಿಲ್ಲ ನಮಗ ಪೂರಾ

  • ಹೂಲಿ ಶೇಖರ್‌
(ಕನ್ನಡ ಜಾನಪದ ಸಾಹಿತ್ಯದಲ್ಲಿ ಗೀಗೀ ಪ್ರಕಾರಕ್ಕೆ ವಿಶಿಷ್ಠ ಸ್ಥಾನವಿದೆ. ಉತ್ತರ ಕರ್ನಾಟಕದಲ್ಲಿ ಗೀಗೀ ಪದ ಹಾಕುವ ಮೇಳಗಳು ಸಾಮಾಜಿಕ ಎಚ್ಚರಿಕೆಯನ್ನು ಮೂಡಿಸಿದ್ದವು. ಈ ಗೀಗೀ ಪದ್ಯದಲ್ಲಿ ಸಾಕ್ಷರತೆಯ ಅರಿವು ಮೂಡಿಸುವ ಕಾಳಜಿ ಇದೆ. ಜತೆಗೆ ಕನ್ನಡ ಜನಪದ ಭಾಷೆಯ ಸೊಗಡು ಇದೆ. )


ಕುಂತ ಮಂದಿ ಸಭಾದಾಗ ಎದ್ದ ನಿಂತ ಹೇಳತೀವಿ
ಝಲ್ಲಬಿಟ್ಟ ಕೇಳರಿ ನೀವು ಹಕೀಕತ್ತಾ //ಗೀಗೀ...//
ಭಾರತಾಂಬಿ ಮಕ್ಕಳು ನಾವು ಎಬಡರಂಗ ಇರತೀವಿ
ತಿಳಿದಿಲ್ಲ ಸಾರ ನಮಗ ಪುಟ್ಟ ಪೂರಾ //ಪಲ್ಲ//

ವರುಸ ತುಂಬದರೊಳಗ ಹೊರಸಬದಲಿ ಮಾಡತೀರಿ
ಮನೀ ತುಂಬ ಮಕ್ಕಳಾ ನೋಡರಿ ತಗಣೀ ಹಂಗಾ/
ಒಳ್ಳೇದಲ್ಲ ತಗೀರಿ ಹೆಚ್ಚೇತಿ ಜೀವ ಸಂಖ್ಯೆ ಭೂಮಿ ಮ್ಯಾಗಾ...//ಗೀಗೀ...//

ಭಾರತಾಂಬಿ ಮಕ್ಕಳು ನಾವು ಅವಸರ ಮಾಡಿ ಹಡೀತೀವಿ
ವರುಸಕ್ಕ ಜೋಡಿ ಜೀವ ಠರರರಾ //

ವಿಜ್ಞಾನದ ಕಾಲದಾಗ ಅಜ್ಞಾನದ ಮಾತ್ಯಾಕ
ವಿದ್ಯೆಯಿಂದ ದೂರಬ್ಯಾಡ ಅಲ್ಲೆ ಕುಂತೀರಿಯಾಕ /
ಮುಗಲಾನ ಹನಿ ನೀರು ಮುತ್ತು ಆಗಿ ಬುಡುಕ
ಹುಟ್ಟಿದ್ದು ತಿಳೀಲಿಲ್ಲ ಕೋಡಂಗಿ ಆಗೇವಿ ಕಡೀತನಕ //

ಭಾರತಾಂಬಿ ಮಕ್ಕಳು ನಾವು ಬ್ಯಾಡ ಸಾಲಿ ಅಂತೇವಿ
ಮನಿ ಹುಡುಗರ ಕಳಸೇವಿ ಹೊಲಮನಿ ಕೆಲಸಕ್ಕಾರಾ//
ಆಡು ಮಕ್ಕಳ ಮ್ಯಾಲ ಹಾಕಬ್ಯಾಡ್ರಿ ಮನೀಭಾರ
ಹೊಸಾ ಗಾಳಿ ಹಬ್ಬಿ ಬಂದು ಕತ್ತಲ ಓಡಿಸೇತಿ
ಈ ಸ್ಯಾಡಿ ಪಾರಾಗತಾರು ಲೋಕದ ವ್ಯವರದಾಗ//

ಭಾರತಾಂಬಿ ಮಕ್ಕಳು ನಾವು ಎಬಡರಂಗ ಇರತೀವಿ
ತಿಳಿದಿಲ್ಲ ಸಾರ ನಮಗ ಪುಟ್ಟ ಪೂರಾ//


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+