Get Updates
Get notified of breaking news, exclusive insights, and must-see stories!

ಮಾಯೆ : ಪ್ರೀತಿಗೊಂದು ವ್ಯಾಖ್ಯಾನ

ಪ್ರೀತೀ ನೀ ಮಾಯೆಯಾ
ಮಾಯೆಯೇ ಪ್ರೀತಿಯಾ
ಪ್ರೀತೀ ನೀ ಮಾಯೆಯೇ ಆದರೂ
ಮಾಯೆಯೇ ಪ್ರೀತಿಯಾದರೂ
ಬದುಕಿಗೆ ಈ ಪ್ರೀತಿಯ
ಮಾಯೆಯೇ ಚಿದಂಬರ ರಹಸ್ಯ !

ಪ್ರೀತೀ ನಿನಗಿಲ್ಲ ಯಾವುದೂ
ಅಡೆತಡೆಗಳ ಅಸಾಧ್ಯ
ಪ್ರೀತೀ ನೀನೊಲಿದರೆ ಜೀವನದ
ಒಂದೊಂದು ಕ್ಷಣವೂ ಅಮೃತಘಳಿಗೆ,
ನೀ ಮುನಿದರೆ ಆಗದಿರದೇ ಬದುಕಿನ
ಒಂದೊಂದು ಕ್ಷಣವೂ ವಿಷಘಳಿಗೆ !

ಪ್ರೀತೀ ನೀ ಬದಲಿಸಬಲ್ಲೆ
ಕ್ಷಣದಲ್ಲಿ ಎಲ್ಲರ ಹಣೆಬರಹ,
ಮಾಡಬಲ್ಲೆ ಬದುಕ ಬಲು ಮಧುರ,
ಪ್ರೀತೀ ನೀ ಹೋಗಬಲ್ಲೆ
ಕ್ಷಣದಲ್ಲಿ ದೂರ ದೂರ ದೂರ
ಮಾಡಬಲ್ಲೆ ಬದುಕ ಬಲು ಘೋರ !

ಪ್ರೀತೀ ನೀ ಸ್ವಾರ್ಥಿಯಲ್ಲ,
ಅದಕ್ಕೆ ನೀನಿರೋ ಒಂದೊಂದು
ಹೃದಯಾನೂ ಚುಕ್ಕಿಯಂತೆ ಬೆಳಗಬಲ್ಲದು
ನಿನ್ನಲಿಹುದು ಎಲ್ಲರ ಎಲ್ಲ ಪ್ರಶ್ನೆಗಳಿಗೂ
ಉತ್ತರ, ನಿನ್ನ ಭಾಷೆಯಾಂದೇ ಈ
ಜಗದ ಪ್ರತೀ ಹೃದಯಾನ ಅರಿಯಬಲ್ಲದು !

ಪ್ರೀತೀ ನಿನ್ನ ಬೆಲೆಕಟ್ಟಿ ಕೊಳ್ಳಲಾದೀತೇ
ಹಣಕೊಟ್ಟು ಉಳಿಸಿ, ಬಳಸಲಾದೀತೇ,
ಕೊಟ್ಟರೂ ನಿನಗೆ ಮುತ್ತು ರತ್ನ
ನೀಬರಲಾರೆ, ನಿನಗೇ ನೀನೇ ಬೆಲೆ,
ನೀನೆ ನೆಲೆ, ನೀನೇ ಸೆಲೆ, ಅದಕೆ
ನಾ ಹೊರಟಿರುವೇ ನಿನ್ನಯ ಜೊತೆ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+