ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನದ ಹೊಯ್ದಾಟ

By Staff
|
Google Oneindia Kannada News
ಏನೊಂದು ಆಸೆಗಳು ಮನಕೆ,
ಹಲವಾರು ಕನಸುಗಳು ಅಸೆಗಳಿಗೆ
ಮನದಲಿ ಹೇಗೆ ಉದ್ಭವಿಸುವವು ಆಸೆಗಳು
ಆಸೆಗಳಿಗೆ ಹೇಗೆ ಬೆಸೆವವು ಕನಸುಗಳು?

ಆಸೆಗಳಿಂದ ದು:ಖ
ಕನಸುಗಳಿಂದ ಕ್ಷಣಿಕ ಸುಖ
ಸುಖದು:ಖಗಳ ಮರೀಚಿಕೆಯ ಹಿಂದೆ
ಮನವು ಓಡುತಿರಲು ಎಂಥ ವಿಪರ್ಯಾಸವು

ಈಡೆರದ ಆಸೆಯ ದಾಹಕೆ
ನೀರುಣಿಸುವವೆ ಕನಸುಗಳು?
ಬಳಲಿ ಬೆಂಡಾದ ಮನವ
ತಣಿಸುವವೆ ಕನಸುಗಳು?

ಮನದ ನೂರಾರು ಅಪೂರ್ಣ ಆಸೆಗಳು
ಪೂರ್ಣತೆಯ ತುಂಬುವ ಅಪೂರ್ವ ಕನಸುಗಳು
ಪೂರ್ಣತಾಪೂರ್ಣತೆಯ ಮಧ್ಯೆ ಸಿಲುಕಲು ಮನವು
ತೃಪ್ತಿಕರ ಭಾವನೆಯಿಂದ ಬಹುದೂರ ಸರಿಯಲು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X