ಒಂದು ಕ್ಷಣದ ಮಳೆಯ ಹಾತೆ
- ಅಶೋಕ ಹೆಗಡೆ
[email protected]
ಮಣ್ಣು, ಹುಲ್ಲು ಗರಿಕೆಯು ಕೂಡಾ
ಒಣಗಿ ಮುಖವೆತ್ತಿ ನಿಂತ ನಿಗಿ ನಿಗಿ ಕೆಂಡ,
ಹೊತ್ತಲ್ಲದ ಹೊತ್ತಲ್ಲಿ ಬಿದ್ದ ಯಾವ ಮಳೆಯ ಒಂದಿಷ್ಟು
ಕನಿಕರಕ್ಕೆ ಆದ್ರಗೊಂಡಿತು ನೆಲ, ಹುಂಡಾಗಿ
ಇಳಿದ ನೀರ ಹಿಡಿದಿಟ್ಟ ಒಡಲು ಬಿದ್ದ ಬಿಸಿಲಿಗೆ
ಸ್ವಲ್ಪವೆ ತೆರೆದು ಬಾನ ತುಂಬೆಲ್ಲ ಬಣ್ಣದ ಓಕಲಿ
ಮೊದಲ ಕಿರಣದ ಬೆಚ್ಚನೆಯ ಹವಾಕ್ಕೆ
ಕೋಶದೊಳಗೆ ಕುಳಿತ ಪುಟಾಣಿಗಳ ಮೈಯಲ್ಲಿ
ಒಂದು ಅಣುಸ್ಫೋಟ - ಅಹಾ ಎಂತಹ ಗದ್ದಲ
ಬಲಿತ ಮೈಯನ್ನ ಹೊತ್ತ ಸೋತ ಕಾಲುಗಳಲ್ಲಿ
ಈಗ ನೂರು ಆನೆಯ ಬಲ, ಕುಡಿಯಾಡೆವ ರೆಕ್ಕೆಗೆ
ನೆಲ ಬಗೆದು ಹೊರಕ್ಕೆ ಜಿಗಿಯುವ ತವಕ ಮನೆಯಲ್ಲಿ
ಕುಳಿತ ನಮ್ಮ ಕನ್ನಡಿಯಾಳಕ್ಕೆ ಹೊಳೆಯಲಿಲ್ಲ
ಅವು ಈಗ ವಿಶ್ವ ಕರ್ಮನ ಮಜಬೂತು ಮಹಡಿಗಳ
ಒಂದೊಂದು ಮೆಟ್ಟಿಲಾಗಿ ಹತ್ತಬೇಕು, ಕೊನೆಯ
ಕಿರಣಗಳು ನಂದಿಹೋಗುವ ಮೊದಲು ಒಡಲ ಆಚೆಯನ್ನ ಸೇರಬೇಕು
ಹೊರಗೆ ಸಿಳ್ಳೆ ಹಾಕಿದ ಕುಕ್ಕರು, ಸಿಡಿಯಲು ತಯಾರಾಗಿವೆ
ರೈಲುಗಳು ಕನಸಿನ ಮನೆಗಳನ್ನ ಮುರಿದು ಓಡುತ್ತಿವೆ
ಬಾಲೆಯರು ಕಂಗಾಲಾಗಿದ್ದಾರೆ, ಸಾಲ
ಕೊಟ್ಟವರು, ವಿಟ ಪುರುಷರಂತೆ ನಿಂತಿದ್ದಾರೆ
ಅವರ ಕಣ್ಣಲ್ಲಾದರು ಎಂತ ಹಸಿವು,
(ಬಯಲಲ್ಲಿ ಕಾಗೆಗಳು ಏಕೆ ನಡೆಸಿವೆ ವ್ಯರ್ಥ ಪಂಚಾಯತಿ?)
ಇತ್ತ ಮಳೆಹಾತೆ ನೆಲದ ಮೇಲೆ
ಹಿಂಡು ದಂಡಾಗಿ ಎಂತಹ ಭಾವೋತ್ಕರ್ಷ ಎಲ್ಲಿ
ವಾಮನ, ಎಲ್ಲಿ ಬಲಿ, ಎಲ್ಲಿ ವಂದಿಮಾಘಧರು
ಈಗಷ್ಟೆ ಹಚ್ಚಿಟ್ಟ ನಂದಾಬಟ್ಟಲು ಯಾರನ್ನು ಸುಡುವ ಅಗ್ನಿಕುಂಡ
ಈಗ ಸಂಜೆಯ ಸಮಯ, ಕಾರ್ಪೊರೇಷನ್ನಿನ ಹೊರಗೆ
ಹೆಣ ಹೇರಲು ನಿಂತ ವ್ಯಾನುಗಳು ದಡಬಡಿಸಿ ಹೊರಡಲು ತಯಾರಾಗಿವೆ
(ನಮ್ಮ ವಿಳಾಸ ಯಾವತ್ತಿನಿಂದಲೂ ಇದೆ ಅವರ ಬಳಿ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications