ಜಾನಪದ ಗೀತೆ : ನಂಜುಂಡ
ತಾನಿತಾನಂದನೋ ತಂದೆನಾನಾ
ತಂದನಿತಾನಂದದನೋ ತಂದೆನಾನಾ।।
ತಿಂಗಾನೆ ತಿಂಗಳಿಗೆ ಚಂದಾ ನಂಜನಗೂಡು
ಗಂಧ ತುಂಬೀದೇ ಗುಡಿಗೆಲ್ಲ
ಗಂಧ ತುಂಬೀದೇ ಗುಡಿಗೆಲ್ಲ ನಂಜುಂಡ್ನ
ಕಳಸ ತುಂಬೀದೇ ಹಿಡಿ ಹೊನ್ನು ।। ತಾನಿತಾ।।
ಎಪ್ಪತ್ತು ಗಾವುದಕೆ ನೆಪ್ಪು ನಂಜನಗೂಡು
ಹಿಪ್ಪೇಯ ತೋಪು ಹೊಳೆಸಾಲು
ಹಿಪ್ಪೇಯ ತೋಪು ಹೊಳೆಸಾಲು ಒಳ್ಳೇದೆಂದು
ಅಪ್ಪ ನಂಜುಂಡ ನೆಲೆಗೊಂಡ ।। ತಾನಿತಾ।।
ನಂಜನಗೂಡಲ್ಲಿ ನಮಗ್ಯಾರು ನೆಂಟಾರು
ನಂಜಪ್ಪಸ್ವಾಮಿ ಹಿರಿಯಣ್ಣ
ನಂಜಪ್ಪಸ್ವಾಮಿ ಹಿರಿಯಣ್ಣ ಇದ್ದಾಗ
ಮುಂದ್ಹೋಗಿ ಹೊರಜಿ ಹಿಡಿದೆವು ।। ತಾನಿತಾ।।
ನಂಜನಗೂಡಲ್ಲಿ ನಾಲ್ಕೈದು ಬಾಗೀಲು
ನಂದೀ ಕೋಲೈದು ಪಟವೈದು
ನಂದೀ ಕೋಲೈದು ಪಟವೈದು ನಂಜಪ್ನ
ಮಂಗಳಾರತಿ ಹದಿನೈದು ।। ತಾನಿತಾ।।
ನಂಜನಗೂಡಲ್ಲಿ ಸಂಬಳದ ಸೂಳೇರು
ಕಂಬೀಯ ಸೀರೆ ಎಡಗಾಸೆ ಹಾಕ್ಕೊಂಡು
ನಂಜುಂಡಗಾರ್ತಿ ಬೆಳಗ್ಯಾರೋ ।। ತಾನಿತಾ।।
ನಿಂಬೇ ಹಣ್ಣಿನ ಉಜೆ ತುಂಬೆ ಹೂವಿನ ಗಮಲ
ಇಂದು ನಂಜುಂಡ್ನ ಗುಡಿಯಲ್ಲಿ
ಇಂದು ನಂಜುಡ್ನ ಗುಡಿಯ ಬಾಗಿಲ ಮುಂದೆ
ಜಂಗಮಾ ಗಮನ ನಿಲುಭಾರ ।। ತಾನಿತಾ।।
ಎಡವಲಯ್ಯನ ತೇರು ಬಲದಮ್ಮನ ತೇರು
ರಾಟೇಳಿ ತೇರು ಕೈತೇರು
ರಾಟೇಳಿ ತೇರು ಕೈತೇರು ಗೊಂಬೆ ತೇರು
ಹರಿದೋ ನಂಜಯ್ನ ಎಡಬಲಕೆ ।। ತಾನಿತಾ।।
ಏಳೀರಿ ನಂಜುಂಡ ಏಟ್ಹೊತ್ತು ಸುಖ ನಿದ್ರೇ
ಆನೆ ಬಂದಿದೇ ಅರಮನೆಗೆ
ಆನೆ ಬಂದಿದೇ ಅರಮನೆಗೆ ನಂಜುಂಡ
ಸೂಳೇ ಬಂದವಳೇ ಪಗಡೇಗೆ ।। ತಾನಿತಾ।।
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications