ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆ

By Staff
|
Google Oneindia Kannada News
  • ಸುಬ್ರಾಯ ಚೊಕ್ಕಾಡಿ
ನದಿಯ ಹರಿವಿನ ಮೇಲೆ
ನಿರಾಳ ಮೈ ಚೆಲ್ಲಿದೆ
ಅಂಗಾತ
ಹಠಯೋಗಿಯಂತೆ
ಸೂರ್ಯನ ಕಡೆಗೆ ದೃಷ್ಟಿ ನೆಟ್ಟ
ಒಂದು .

ತೆರೆಗಳೇರಿದ ಹಾಗೆ ಏರಿ
ಇಳಿದಾಗ ಇಳಿದು
ಚಲನೆಯಿಲ್ಲದೆಯೇ ಚಲಿಸುತ್ತಿದೆ
ನದಿಯ ತಲ್ಲಣಕ್ಕನುಗುಣವಾಗಿ

ಮೇಲೆ ಆಕಾಶಕ್ಕೆ ಹಾರದೆ
ಕೆಳಕ್ಕೆ ತಳಕ್ಕಿಳಿಯದೆ
ನದಿ ನಡುವ ತಿರುಗಣಿ ಮಡುವಿಗೆ ಸಿಲುಕಿಯೂ
ಒಳಸೇರದೆ
ಅಂಚಿನಲ್ಲೇ ಸುತ್ತು ಹಾಕುತ್ತಾ
ದಂಡೆಯ ಗುಂಟ ಚಲಿಸುತ್ತಿದೆ
ದಡ ಸೇರದೆ.

ಎರಡೂ ದಡಗಳ ಜೀವ ಚಟುವಟಿಕೆಗಳ ಗದ್ದಲ
ಗಮನಿಸಿಯೂ ಗಮನಿಸದೆ
ನದಿಯಾಡನೆ ಅಂಟಿರದ ನಂಟ ಕಾಪಾಡುತ್ತ
ಆಗಸದ ಹಕ್ಕಿಗಳ ಚಿಲಿಪಿಲಿಯ
ಸ್ವರಗಳಲೆಗಳ ನಡುವೆ
ತನ್ನದೇ ಪೂರ್ಣತೆಯಲ್ಲಿ
ನಿರಂತರವಾಗಿ
ಕಾಯುತ್ತಲೇ ಇದೆ

ಪುಟ್ಟ ಮಗುವಿಗೆ
ಹೊಸ ಹಗಲಿನ ನಗುವಿಗೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X