Get Updates
Get notified of breaking news, exclusive insights, and must-see stories!

‘ನನ್ನ ಕನಸಿನ ಊರು’

  • ವೀ. ಪ. ಬಳಿಗಾರ್‌ (ಐ ಎ ಎಸ್‌ ಅಧಿಕಾರಿ , ಬೆಂಗಳೂರು)
ನನ್ನ ಕನಸಿನ ಊರಲ್ಲಿ
ನೋಟಿಗೆ ಓಟುಗಳ ಮಾರಾಟವಿಲ್ಲ
ಹೆಂಡ ಸರಾಯಿ ಹೊಳೆ ಹರಿಯುವುದಿಲ್ಲ.
ಓಣಿ-ಓಣಿಗಳ ಮಧ್ಯ ಕಂದಕಗಳಿಲ್ಲ
ಮಂದಿರದ ಪ್ರಾರ್ಥನೆ- ಜಾಗಟೆಗಳು
ಮಸೀದಿಯ ನಮಾಜು- ಮೈಕುಗಳು
ದ್ವೇಷ ಬಿತ್ತುವುದಿಲ್ಲ-ಶಾಂತಿ ಕದಡುವುದಿಲ್ಲ.
ಹಬ್ಬ ಹರಿದಿನಗಳಲ್ಲಿ ಪ್ರಾಣಿಗಳ ಬಲಿಯಿಲ್ಲ
ಮಾಟ-ಮಂತ್ರಗಳಿಗೆ ಎಳ್ಳಷ್ಟು ಒಲವಿಲ್ಲ.

ನನ್ನೂರಿನ
ಬಾಲ-ಬಾಲೆಯರು
ಶಾಲೆ ಬಿಟ್ಟು ಕೂಲಿ ಮಾಡುವುದಿಲ್ಲ
ಆಟ-ಪಾಠ ಓಟಗಳಲಿ ಹಿಂದೆ ನೋಡಿಲ್ಲ

ಶಿಕ್ಷಕ- ಶಿಕ್ಷಕಿಯರು
ಕಲಿಸುವುದನು ಬಿಟ್ಟು ಕಾದಾಡುವುದ ಮಾಡುವುದಿಲ್ಲ
ಶಾಲೆಗಳ ಹಂಚುಗಳು ಹಾರಿ ಹೋಗಿಲ್ಲ.
ಗೋಡೆಗಳು ಬಿರುಕು ಬಿಟ್ಟಿಲ್ಲ.

ವೈದ್ಯ-ದಾದಿಯರು
ರೋಗಿಗಳು ರಕ್ತ ಹೀರುವುದಿಲ್ಲ
ಹೆಣದ ಕಿಸೆಗೆ ಕೈ ಹಾಕುವುದಿಲ್ಲ
ಮಾತ್ರೆಗಳ ಮಾರಾಟ ಮಾಡುವುದಿಲ್ಲ.

ವ್ಯಾಪಾರಿಗಳು
ಅನ್ಯಾಯದ ತಕ್ಕಡಿ ತೂಗುವುದಿಲ್ಲ
ಗ್ರಾಮ ಲೆಕ್ಕಿಗ
ರೈತ-ರೈತರ ನಡುವೆ ಜಗಳ ಹಚ್ಚುವುದಿಲ್ಲ.

ಊರ ಪಂಚಾಯತಿಯಲಿ
ಗ್ರಾಮ ಸಭೆಗಳಿಲ್ಲದೆ ಯೋಜನೆಗಳ ರಚನೆಯಿಲ್ಲ
ನನ್ನೂರಿನಲ್ಲಿ
ಬಡವರಿಗೆ ಕೊಟ್ಟ ಮನೆಗಳು ವರುಷಗಳಾದರಿನ್ನೂ ಮುರಿದು ಬಿದ್ದಿಲ್ಲ
ಎಮ್ಮೆ-ಹಸುಗಳು ಬರಡಾಗಿ ನಿಂತಿಲ್ಲ.

ಬೀದಿ ದೀಪಗಳು ಹಗಲಿನಲಿ ಉರಿಯುವುದಿಲ್ಲ
ನಲ್ಲಿ ನೀರು ಪೋಲಾಗಿ ಹರಿಯುವುದಿಲ್ಲ
ಕೂಲಿಗಾಗಿ ಬಂದ ಕಾಳು
ಕಾಳಸಂತೆ ಸೇರುವುದಿಲ್ಲ
ಬರಪರಿಹಾರದ ಕೆರೆ-ಕಟ್ಟೆ , ಒಡ್ಡುಗಳು
ಭಾರೀ ಮಳೆಗೂ ಒಡೆದು ಹೋಗುವುದಿಲ್ಲ

ನನ್ನೂರಿನ
ಮಕ್ಕಳು
ಬೀದಿ ಬದಿಯೇ ಹೊಲಸು ಮಾಡುವುದಿಲ್ಲ
ಮಹಿಳೆಯರು
ಕತ್ತಲಾಗುವವರೆಗೆ ಕಾಯಬೇಕಿಲ್ಲ
ರಾತ್ರಿ ಬಸ್ಸು ಬಂದರೆ ಎದ್ದು ನಿಲ್ಲಬೇಕಿಲ್ಲ.

ಯುವತಿಯರು
ಸೈಕಲ್‌ ಏರಿ
ಕಾಲೇಜಿಗೆ ಹೋಗಲು ಹೆದರುವುದಿಲ್ಲ
ವರದಕ್ಷಿಣೆ ಬೇಡುವ ಭಿಕ್ಷುಕರ ವರಿಸುವುದಿಲ್ಲ
ಸ್ತ್ರೀ ಶಕ್ತಿ ಸಂಘಗಳು
ಉಳಿತಾಯ ಆದಾಯ ಸಂಘಟನೆಯಲಿ ಹಿಂದೆ ಬಿದ್ದಿಲ್ಲ.
ರೈತರು
ಹೊಸ ವಿಧಾನ ಕೃಷಿಯಲಿ ಕೈಯಾಡದೇ ಇಲ್ಲ
ಹನಿ ನೀರನು ಹೊಲದಾಟಿ ಬಿಡುವುದೇ ಇಲ್ಲ.
ಕಂಬಾರ, ಕುಂಬಾರ, ನೇಕಾರರೆಲ್ಲ
ಕಾಯಕ ಘನತೆ ಕೌಶಲ್ಯಗಳ ಮರೆತಿಲ್ಲ.

ನನ್ನೂರಿನಲ್ಲಿ
ಕೆರೆ ಅಂಗಳ ಗೋಮಾಳಗಳ ಒತ್ತುವರಿಯಿಲ್ಲ
ಗುಂಡು ತೋಪಿನ ಮರಗಳು ಸಾಮಿಲ್ಲು ಸೇರಿಲ್ಲ
ಹಳ್ಳ-ಕೊಳ್ಳ ಮಡುವುಗಳು ಬತ್ತಿ ಹೋಗಿಲ್ಲ
ಹಕ್ಕಿ ಪಕ್ಷಿಗಳು ದೂರ ಹಾರಿ ಹೋಗಿಲ್ಲ
ಗುಬ್ಬಚ್ಚಿಗಳ ಚಿಂವ್‌ಗುಡಿಕೆ ಮಾಯವಾಗಿಲ್ಲ.
ಕುಸ್ತಿ ಕ್ರೀಡೆ ಸ್ಪರ್ಧೆಗಳಿಗೆ ಲೆಕ್ಕವಿಲ್ಲ.
ಜಾನಪದ ಹಾಡು ದೊಟ್ಟಾಟಗಳಿಗೆ ಕೊರತೆಯಿಲ್ಲ
ಆಧ್ಯಾತ್ಮ ಗೋಷ್ಠಿಗಳಿಗೂ ಬರವಿಲ್ಲ
ಬೀರು ಬಾರುಗಳಿಗೆ ಮಾತ್ರ ಪ್ರವೇಶವಿಲ್ಲ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+