ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಹಾಯಕತೆ

By Staff
|
Google Oneindia Kannada News
ತಿಂಗಳಿನ ಮೂವತ್ತೂ ದಿನಗಳು
ವೃದ್ಧಿಸದ ಕ್ಷಯಿಸದ
ನಕ್ಷತ್ರವೊಂದು ಮಿಣುಗುತ್ತಲೇ ಇರುತ್ತದೆ,
ಆಗಾಗ ಚರಾಚರವನು ಅಣಕಿಸುತ್ತ
ಹಾಗೇ ನಿನ್ನ ನೆನಪಿನಂತೆ!

ನೋಡುತ್ತಿರುತ್ತೇನೆ....
ಪುಟಪಾತಿನಲ್ಲೇ ಸುಖವಾಗಿ
ನಿದ್ರೆಹೋದ ಮಗುವನ್ನು,
ಹಸಿದ ಹೊಟ್ಟೆಗೆ ಅಂಬರದ,
ತಿಂಗಳ ಬೆಳಕನ್ನೇ ಸುರಿದುಕೊಳ್ಳುತ್ತಿರುವಂತೆ!

ಮನೆಯಲ್ಲಿ ಕಾಣುತ್ತೇನೆ....
ತಾಯಿ ಮಗುವಿಗೆ ಮಗ್ಗಿ ಕಲಿಸುವದನ್ನು,
ಕೈತುತ್ತಿನಲ್ಲಿ ಪ್ರೀತಿ ಹರಿಸುವದನ್ನು,
ಮತ್ತೆ ಗುಟುರು ಹಾಕುವ ಗಂಡನಿಗೆ
ಬೆದರಿ ನಡುಗುವ ಹುಲ್ಲೇ ಮರಿಯಂತೆ!!

ಗೊಣಗಿಕೊಳ್ಳುತ್ತೇನೆ....
ಇದನ್ನೆಲ್ಲ ನಾನು ಸರಿಪಡಿಸಬಲ್ಲೆನೇನು ?
ನಮ್ಮ ನಮ್ಮ ಪ್ರಾರಬ್ಧವಲ್ಲವೇ
ಇದ್ದೀ ನೀನೂ ಇದ್ದೂ ಇಲ್ಲದಂತೆ,
ಕಣ್ಣಿದ್ದರೂ ದೃಷ್ಟಿಹೀನ ಕುರುಡನಂತೆ!!!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X