ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವಾಗಲೂ ಹೀಗೆ!

By Staff
|
Google Oneindia Kannada News
ಯಾವುದನ್ನೂ ಪರಾಮರ್ಶಿಸರು,
ಹಿರಿಯರ ಹಿತನುಡಿಗಳಿಗೆ ಕಿವಿಗೊಡರು

ಒಡಹುಟ್ಟಿದ ತಮ್ಮ, ತಂಗಿಯರಿಗಿಂತ,
ತೆಂಡೂಲ್ಕರ್‌, ಶಾರುಕ್‌ ಖಾನ್‌, ಐಶ್ವರ್ಯಾರಾಯ್‌ಗಳು ಇಷ್ಟ
ಬರಿ ಟೀವಿ, ಸಿನಿಮಾಗಳಲ್ಲಿ ಇವರನ್ನು ನೋಡೇ
ಇಷ್ಟ ... ಸಾರಿ... ಪಂಚ ಪ್ರಾಣವಾಗಿಬಿಡುತ್ತಾರೆ!

ಕೊಂಡು ಕೊಳ್ಳುವ ಪುಸ್ತಕಗಳೋ ರಾಶಿ ರಾಶಿ,
ಓದುವುದು ಮಾತ್ರ ಆಗೊಮ್ಮೆ ಈಗೊಮ್ಮೆ !

ಬಣ್ಣ ಬಣ್ಣದ ತರಾವರಿ ಉಡುಗೆ,
ಅಗಾಗ ಅಗಿಯಲು ಬಬ್ಬಲ್‌ಗಮ್‌,
ಹೆಗಲಲೊಂದು ಚಿತ್ರ ವಿಚಿತ್ರ ಬ್ಯಾಗು,
ಆರಿಂಚಿಗೂ ಎತ್ತರದ ಹೈ ಹೀಲ್ಡ್‌ ಚಪ್ಪಲಿ!

ಹೆಗ್ಗಳಿಕೆಗೊಂದು ಮೊಬೈಲ್‌ ಬೇರೆ,
ಜೊತೆಗಿರಲೆಂದೊಬ್ಬ ಬಾಯ್‌ು ಫ್ರೆಂಡ್‌ !

ಇವಿಷ್ಟಾದರು ಪಡೆಯಲು ಮರೆವು ಇರದು,
ಆದರೆ ಅವನ ವಿವರಗಳಿರಲಿ, ವಿಳಾಸವೇ
ಸರಿಯಾಗಿ ತಿಳಿಯದು! ಇದನ್ನೆಲ್ಲಾ ಅರಿವ ಕುತೂಹಲ,
ಕೌತುಕತೆ ಎಂದಿಗೂ ಇವರಿಗೆ ಬರದು !!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X