Get Updates
Get notified of breaking news, exclusive insights, and must-see stories!

ಯಾಕ್‌ ಹೀಗ್‌ ಮಾಡ್ತೆ?


;?

  • ಕೆ.ವಿ.ನಂದಕುಮಾರ್‌, ನಂಜನಗೂಡು.
    [email protected]
ತನ್ನಾಸೆಗಳನ್ನೆಲ್ಲ ಹತ್ತಿಕ್ಕಿ
ನಿನ್ನ ಇಷ್ಟೆತ್ತರಕ್ಕೆ ಬೆಳೆಸಲು
ಬದುಕನು ಸವೆಸಿದ ರೀತಿ,
ಸ್ಕೂಲ್‌ ಫೀಸು, ಸ್ಲೇಟು, ಬಳಪ, ಪುಸ್ತಕ,
ಜಾಮಿಟ್ರಿ ಬಾಕ್ಸು, ಯೂನಿಫಾರಮ್‌ ಬಸ್‌ ಫೇರ್‌,
ನೀ ಇಷ್ಟಪಟ್ಟ ತಿಂಡಿ ತಿನಿಸು,
ಎಲ್ಲಾ ಅಂದರೆ ಎಲ್ಲಾ ಒದಗಿಸಲು
ಅಪ್ಪ ಹೆಣಗಾಡಿದ ಪರಿ
ನಿನಗೆ ನೆನಪಿಲ್ಲವೇನೆ?

ನಿನ್ನ ಎಸ್‌.ಎಸ್‌.ಎಲ್‌.ಸಿ, ಪಿ.ಯು.ಸಿ, ಮತ್ತು
ಸಿ.ಇ.ಟಿ ಪರೀಕ್ಷೆಗಳ ದಿನಗಳಲ್ಲಿ
ಅಪ್ಪನಿಗಿದ್ದ ಆಂತಕ, ನಿನ್ನ ಪ್ರತಿ
ಗೆಲುವಿನೆಡೆಗೆ ಆತನಿಗಿದ್ದ ಒಲವು,
ಮುಂದೊಮ್ಮೆ ಎಂದಾದರೂ
ನೀ ಊರುಗೋಲಾಗಬಹುದು ಎಂದೆನಿಸಿ
ನೀ ಚಿಗುರಿಸಿದ ಆಸೆ ಮರೆತೇ ಹೊಯಿತೆ?

ಹೃದಯದಿ ಸೆಳಕು, ಸೊಂಟನೋವುಗಳಿಗೂ
ಸೋಲದೆ ಅಂದೊಂದು ದಿನ ಅಮ್ಮ
ಕಷ್ಟ ಪಟ್ಟು ಸುಟ್ಟು ಕೊಟ್ಟ ರುಚಿ
ರಾಗಿ ರೊಟ್ಟಿಗಳಿಗೆ ಇಂದಿನ ನ್ಯೂಡಲ್ಸ್‌,
ಪಿಜಾ ಸರಿಸಾಟಿಯಾಗ ಬಲ್ಲದೇನೆ ಹುಡುಗಿ?

ಹದ್ದುಗಳಿಗೆದರಿ ರೆಕ್ಕೆಗಳಡಿಯಲ್ಲಿ
ಮರಿಗಳನಡಗಿಸುವ ಕೋಳಿಯ ಶೈಲಿ, ಅಮ್ಮನ
ಬದುಕು ಮತ್ತು ನಿನ್ನ ಇಂದಿಗೂ ಬೆಳೆಸುವ ರೀತಿ!
ಅವಳ ಪ್ರೀತಿ ಅನನ್ಯ, ಮರೆತೆಯೇಕೆ ಹುಡುಗಿ?

ಅಂದು ನೀ ಕೇಳಿದೆಯಲ್ಲಾ ಎಂಬ ಕಾರಣಕ್ಕೆ
ಹುಂಡಿಯಾಡೆದು ಹಣ ಹೊಂದಿಸಿ
ತಂದುಕೊಟ್ಟ ಆ ಹೀರೋ ಪೆನ್‌ಗಿಂತ
ಅವನ್ಯಾರೋ ನಿನ್ನ ಗೆಳೆಯ ಗುಟ್ಟಾಗಿ
ತಂದುಕೊಟ್ಟ ಮೊಬೈಲ್‌ ಎಂದಿಗಾದರೂ
ಅಮೂಲ್ಯವಾದೀತೇನೆ?
ಹುಟ್ಟಿನಿಂದ ಅಪ್ಪ ತೋರುವ ಪ್ರೀತಿ, ಆದರಕ್ಕಿಂತ,
ನಿನ್ನವನ ಇತ್ತೀಚಿನ ಪ್ರೀತಿ
ಎಂದಿಗೂ ಮಿಗಿಲಾಗದು ಅನ್ನಿಸಲೇ ಇಲ್ಲವೇನೆ?

ಬಾನೆತ್ತರಕ್ಕೆ ನೀ ಬೆಳೆಯುತ್ತಾ ಹೋದಂತೆಲ್ಲಾ,
ಅಪ್ಪ ಹೇಳುವ ತಿಳಿವಳಿಕೆ ಮಾತುಗಳು,
ಗಿಳಿಯಂತಾರಾಡುವ ನಿನಗೆ ಅರಿಯಲು
ಅದ್ಯಾವ ಅರಿವಳಿಕೆ-ಮಂಪರು ಅಡ್ಡಿ ಬಂದವು ?

ಹೊಸ ತಾರುಣ್ಯ, ರೂಪ, ಆಧುನಿಕ ಬದುಕು,
ಉಡುಗೆ-ತೊಡುಗೆ, ಮತ್ತು ಹೊಸ ಹೊಸ ಅವಿಷ್ಕಾರ,
ಹೆತ್ತವರೆಡೆಗಿನ ಕಾಳಜಿ ಕಡಿತಗೊಳಿಸಿಬಿಟ್ಟಿತೆ?

ಅವರುಗಳಿಗೆ ನೀ ಬಗೆದ ಈ ಪರಿ ದ್ರೋಹಕ್ಕಿಂತ
ಹೆಚ್ಚಿನದೇನಿದೆ? ಚೇತರಿಸಿಕೊಳ್ಳಲು
ಬೇಕಾಗಬಹುದು ಅವರಿಗೆ ಮತ್ತೊಂದು ಮರು ಹುಟ್ಟು!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+