Get Updates
Get notified of breaking news, exclusive insights, and must-see stories!

ತಾಯಿ ಹಕ್ಕಿಯ ಹಾಡು

  • ಚಿಂತಾಮಣಿ ಕೊಡ್ಲೆಕೆರೆ
ಮರಿಹಕ್ಕಿಯೇ ಹಾರು ಆಗಸಕ್ಕೆ
ಬಡಿ ನಿನ್ನ ರೆಕ್ಕೆ
ತಾಯಿ-ಗುಟುಕನ್ನಿಟ್ಟು
ಇಷ್ಟು ದಿನ ಸಲುಹಿದೆ
ಹಾರಲೂ ಕಲಿಸಿದೆ

ನೀನೀಗ ಆಗಸಕ್ಕೆ ಹಾರಿ ಹೋಗು
ಆಗಸದಲ್ಲಿ ಚಂದ್ರಾಮನಿದ್ದಾನೆ
ಮಳೆರಾಯನಿದ್ದಾನೆ
ಚುಕ್ಕಿಗಳಿವೆ
ಅಲ್ಲೂ - ಹಕ್ಕಿಗಳಿವೆ

ಮರಿ ಹಕ್ಕಿಯೇ ಹಾರು ಆಗಸಕ್ಕೆ
ನಾ ಕಾಣದೆಲ್ಲೆಗಳ ಕಾಣು ಹೋಗು
ನಾ ಮೀರದೆಲ್ಲೆಗಳ ಮೀರು ಹೋಗು

ನಿನ್ನ ರೆಕ್ಕೆ ದಣಿಯುವವರೆಗೂ
(ದಣಿಯದಿರಲಿ ಮಗೂ)
ಹಾರುತ್ತಿರು
ನಿನ್ನ ಗಂಟಲೊಣಗುವವರೆಗೂ
(ಒಣಗದಿರಲಿ ಮಗೂ)
ಹಾಡುತ್ತಿರು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+