ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹರೆಯ...’

By Staff
|
Google Oneindia Kannada News
  • ಪ್ರಸನ್ನ ರೇವಣ್‌, ಸ್ಯಾಂಡಿಯಾಗೊ
    [email protected]
ಅಮ್ಮಾ ನಾನು ಆ ಕೋಣೆಯಲ್ಲಿ ಓದಲೊಲ್ಲೆ ,
ಅಲ್ಲಿ ಬೆಕ್ಕಿನ ಮರಿ ಪರಚುತ್ತವೆ

ಅಮ್ಮಾ ನಾನು ಹೊಳೆಯಿಂದ ನೀರ ತರಲೊಲ್ಲೆ,
ನಿಂಬೆ ತೋಟದಿಂದ ಹುಡುಗ ಹಣ್ಣು ಬೀರುತ್ತಾನೆ

ಅಮ್ಮಾ ನಾನು ನಿನ್ನ ಜೊತೆ ಗುಡಿಗೆ ನೆಡೆಯಲೊಲ್ಲೆ
ಕಪ್ಪುದಾರಿಯಲ್ಲಿ ದೀಪಗಳಂತೆ ಹೊಳೆಯುವ ಕಣ್ಣುಗಳು ನನ್ನನ್ನು ಕಾಡುತ್ತವೆ

ಅಮ್ಮಾ ನಾನು ಚಿಕ್ಕಮ್ಮನ ಮನೆಗೆ ಬೆಣ್ಣೆಕೊಡಲು ಹೋಗಲೊಲ್ಲೆ,
ತೇರಿನ ಸಂದಿಯಿಂದ ನುಡಿವ ಕೊಳಲು ನನ್ನನ್ನು ಸೆಳೆಯುತ್ತದೆ

ಅಮ್ಮಾ ನಾನು ಬೆಳದಿಂಗಳಲ್ಲಿ ಹಾಡಲೊಲ್ಲೆ,
ತಂಗಾಳಿಯ ಸುಗಂಧಗಳು ನನ್ನನ್ನು ಪುಳಕಿಸುತ್ತವೆ,

ಅಮ್ಮಾ ನಾನು ದೇವರ ಕೋಣೆಗೆ ಬರಲೊಲ್ಲೆ,
ಅಲ್ಲಿ ರಾಧಾಕೃಷ್ಣರು ಚಿತ್ರದಿಂದಲೇ ಅಣಕಿಸುತ್ತಾರೆ,

ಅಮ್ಮಾ ನಾನು ಏನು ಮಾಡಲಿ ಹೇಳೇ?
ಕಪಾಟಿನಲ್ಲಿರುವ ಮಾವಿನಹಣ್ಣುಗಳು ಮಾುತ್ತಿವೆ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X