Get Updates
Get notified of breaking news, exclusive insights, and must-see stories!

ಕೊನೆಗೊಂದು ಬಾರಿ ಕಣ್ಣು ಕೂಡಿಸು



(ಗಜಲ್‌)Turuvihaala Chandru, Belgaum

  • ತುರುವೀಹಾಳ ಚಂದ್ರು
ತನ್ನಂತರಂಗವನು ದಿನವೂ ದಿಟ್ಟಿಸಿ ನೋಡುತ್ತಿದ್ದ ಎಲೆಯಾಂದು ನಿಶ್ಯಬ್ದವಾಗಿ ಉರುಳಿಬಿದ್ದಿತು ನದಿಗೆ
ಸಖಿ, ನನ್ನ ಜೀವ ನುಂಗಿ ಮಲಗಿರುವ ನಿನ್ನ ಬೈತಲೆಯಲಿ ಚಂದ್ರನನು ಮುಕ್ಕಾಗಿಸಿದೆ ಬಿದಿಗೆ

ಹಳೆಯ ಪುಸ್ತಕದಂಥ ಅವ್ವನ ಸೀರೆಯ ಕಮ್ಮನೆ ವಾಸನೆಗೆ ಹೇಗೆ ಹಿಗ್ಗುತಿದೆ ಜೀವ
ಒಡೆದ ಬಳೆಚೂರಿನಲಿ ಕಳದು ಹೋಗಿರುವ ಅವಳ ಕನಸನ್ನು ಮರಳಿ ದೊರಕಿಸಿಕೊಡು ದೇವ

ಯಾರು ಕಳಿಸಿದರೆಂದು ಹೆಸರು ಹೇಳದೆ ಹಾರಿ ಹೋಯಿತು ಮುಂಜಾನೆ ಮನೆ ಮೇಲೆ ಕೂತಿದ್ದ ಹಕ್ಕಿ
ಇರುಳ ತೇರನಿಳಿದು ನೀನು, ಬಲಗಾಲಿಲೇ ನನ್ನೆದೆ ತುಳಿದು ಚಂದ್ರಮನ ತಿಂದ ತುಟಿಯಲ್ಲಿ ಮುಗುಳ್ನಕ್ಕೆ

ಬಿಂಬ ತೋರುವ ಕನ್ನಡಿಯನಾರೋ ಕಸಿದರೆಂದು ನಿನಗೇಕೆ ಸಖಿ, ನನ್ನ ಕಣ್ಣು ಕಳೆಯುವ ಮುನಿಸು
ಏಳು ಬೆಟ್ಟಗಳಾಚೆಯ ಪ್ರಾಣಪಕ್ಷಿ ನೀನು : ಆ ಕಣ್ಣೊಳಗೆ ಜ್ವಲಿಸುತಿದೆ ಗಾಯಗೊಂಡಿರುವ ನನ್ನ ಮನಸು

ಅಡಿ ಇಟ್ಟಲ್ಲಿ ನುಡಿ ಉಣಿಸುವ ಎಷ್ಟೋ ಜೀವಗಳ ಹರಕೆ ನನ್ನ ಬೆನ್ನ ಹಿಂದಿದೆ
ಬರೀ ನೋಟದಲಿ ನೀನು ಬಿಡಿಸಿ ಹೋಗಿರುವ ನೋವಿನ ಹಾದಿ ಕರಗದೆ ಈ ಕಣ್ಣ ಮುಂದಿದೆ

ನಿರಾಕರಣೆಯ ನಂತರವೂ ನಾ ನಿನ್ನ ಬಯಸಿದರೆ ನನ್ನ ರಕ್ತ ನಾನೇ ಕುಡಿದು ಬದುಕಿದಂತೆ
ಎದೆಯಲೊಂದು ಮಮತೆ ಹಣತೆ ಇಲ್ಲದ ಜನರ ನಡುವೆ ನೀನೆಂತು ಉಸಿರಾಡುವೆ, ನನಗಿರುವ ಚಿಂತೆ

ನನ್ನೆದೆಯ ಕುಲುಮೆಯ ಮೇಲೆ ಉರಿ-ಹುರಿದ ಕನಸುಗಳು ಸಖಿ, ಮೌನದಿಂದಲೆ ಮಣ್ಣುಗೂಡಿಸು
ದೇವರನು ಎದುರಿಸಲಾದರೂ ಈ ಪಾಪಿಯ ನೋಟದೊಂದಿಗೆ ಕೊನೆಗೊಂದು ಬಾರಿ ನೀ ಕಣ್ಣು ಕೂಡಿಸು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+