ಹನಿ ಸಿಂಚನ
- ಪ್ರೊ. ಎನ್.ಜಿ.ಪಟವರ್ಧನ್, ಉಜಿರೆ
ನನಗೆ ಯೌವನವಿದ್ದಾಗ
ಪ್ರೇಮಪತ್ರ ಬರೆಯಲು
ಧೈರ್ಯವಿರಲಿಲ್ಲ.
ಈಗ ಬರೆಯೋಣವೆಂದರೆ
ನನ್ನವಳು ಇದ್ದಾಳಲ್ಲ!
*
ಮಾಯ
ಜಾದೂಗಾರ, ಜಾದು ಹೊಸದು
ತಲೆಯಲಿದ್ದ ಹ್ಯಾಟು ಮಾಯ
ಅದೇ ಜಾದು ನನ್ನವಳದು
ಕಿಸೆಯ ನೋಟು ಮಂಗಮಾಯ !
*
ಜೀವನ ಪಾಠ
ಜೀವನದಲ್ಲಿ
ಪಾಠಗಳನ್ನು
ಕಲಿಯುತ್ತ ಹೋದಂತೆ
ಹೊಸಹೊಸ
ಪಠ್ಯಪುಸ್ತಕಗಳೇ
ಬರುತ್ತಿರುತ್ತವೆ!
*
ಬಾಸಿಂಗ
ಬಾಸಿಂಗವನ್ನು
ಧರಿಸಿದವರ
ಮಾಲೆಯೂಡುತ್ತಿದ್ದಂತೆ
ಅತನ ಮೊಗವನ್ನು
ಕಂಡು ವಧು
ಮನದಲ್ಲೇ
ಬಾ ....ಸಿಂಗ ಎಂದಳು!
*
ಜೀವನ -ಕಾವ್ಯ
ಬಾಲ್ಯದಲ್ಲಿ
ಉತ್ಸಹ -ರಗಳೆ
ಯೌವನದಲ್ಲಿ
ಲಲಿತ -ರಗಳೆ
ವೃದ್ದಾಪ್ಯದಲ್ಲಿ
ಮಂದಾನಿಲ -ರಗಳೆ
*
ಭಯ
ವ್ಯಾಸ ಎಂದೊಡನೆ
ನನಗೆ ಎಲ್ಲಿಲ್ಲದ ಭಯ !
ಮಹಾಭಾರತದ ವ್ಯಾಸರಿಗಲ್ಲ-
ನನ್ನವಳು ಬೆಳೆಸಿಕೊಂಡಿರುವ
ಶರೀರದ ವ್ಯಾಸಕ್ಕೆ!
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications