ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಮ್ಮ

By Staff
|
Google Oneindia Kannada News
ಐದು ಕೋಟಿ ಮಕ್ಕಳ ತಾಯಿ
ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ

50 ವಸಂತಗಳ ಕಳೆಯುತಿಹ ತಾಯಿ
ಇವಳ ಬಹು ಮಕ್ಕಳದು ಬರಿಯ ಬಡಾಯಿ
ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು
ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು

ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ
ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ
ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು
ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು

ಪರರ ಮಕ್ಕಳದೇ ಎಲ್ಲಾ ಕಾರುಬಾರು
ಬಹು ಮಕ್ಕಳೆಲ್ಲಾ ಇವರ ದಾಸರು
ಕೆಲ ಮಕ್ಕಳಷ್ಟೇ ತಾಯ ಮಾನ ಕಾಪಾಡಹತ್ತಿಹರು
ಆಗಲಿ ಇವರ ಕೈ ಬಲ ಪಡಿಸುವುದಕ್ಕೆ ನಮ್ಮ ಕರಾರು

ಇಂದಿನ ಕನ್ನಡದ ಸ್ಥಿತಿ ನೋಡಿಯೂ
ನೋಡದಂತಿರುವವರೇ ಬಹು ಮಕ್ಕಳು
ಅವಳ ಕಷ್ಟವರಿತು ಕಾಪಾಡಲು ಮುಂದೆ
ಬಂದಿರುವವರೇ ಕೆಲ ಮಕ್ಕಳು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X