Get Updates
Get notified of breaking news, exclusive insights, and must-see stories!

ಈ ನೆಲದೊಳಗೆ

  • ಡಿ.ಎಸ್‌. ರಾಮಸ್ವಾಮಿ
ಹೊಳೆವ ಹೊಂಬಣ್ಣದೋಕುಳಿ ಕೇಳಿ
ಅರಮನೆ-ಕುದುರೆ-ಸವಾರಿ ಆಟ,
ವಿಕ್ರಮದ ವಿಜಯಕ್ಕೆ ಅಸೂಯೆ ಅಡ್ಡಿ-
ಸುಖ ಮೆಟ್ಟಿ ಕಲ್ಲಾಗಿ ನಿಂತ ಮಹಾವಿರಕ್ತ.

ತೆರೆ ಎಳೆದ ಕಾವದಂತೇ ಸಂಸಾರ ಗುಟ್ಟು
ಲೌಕಿಕದ ದ್ವೆ ೖತ ಸಾಗಬೇಕಿರುವ ಹಾದಿ,
ಕಾಯದ ಮೋಹಕ್ಕೆ ಎಚ್ಚರ ತಪ್ಪುವ ಗಂಡ-
ಒಲಿದವನನ್ನರಸುತ್ತ ನಡೆದ ದಿಟ್ಟ ಹೆಣ್ಣು.

ಸೂರ್ಯಚಂದ್ರರಿಗೂ ಚಣ ಹೊತ್ತು ಬಿಡುಗಡೆ ಕೊಟ್ಟು
ಕಾಲ ನಿಂತಲ್ಲಿ ನಿಂತಂತೆ ಭಾಸ,
ಭ್ರಮೆಯ ನೇಪಥ್ಯ ಸರಿದು-
ಯಯಾತಿಗೂ ಉಂಟೆ ಶೂನ್ಯ ದರ್ಶನದ ಅರಿವು?

ಸಾಕು ಹುಡುಗಿಯ ತುಟಿ ತುದಿಯಲ್ಲಿ ವಿಷ
ಪುಷ್ಠ ರಸಫಲದೊಳಗೇ ನಾಸಿಕ-ಕ್ಷಯದ ಸುವರ್ಣ ಕೀಟ-
ನಗುಮುಖದಡಿಯಲ್ಲೇ ತಮದ ದ್ವೇಷ!

ತಣ್ಣನೆತ್ತರ ಸರೀಸೃಪ ಒಳಗೇ ಸರಿಯುತ್ತಿರುವಾಗ
ಕಥೆಗೆ ಹಾತೊರೆಯುವನು ಜನಮೇಜಯ,
ಗಳಿಗೆ ಬಟ್ಟಲ ಗಂಟಲಿಗೇ ಅಂಟಿನಿಲ್ಲುವ ಜಾಡ್ಯ-
ನಿಲ್ಲಿಸಿದ್ದುಂಟೆ ಕಾಲಚಕ್ರದ ಗತಿಯ?!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+